ಹೊಗೇನಕಲ್ ವಿವಾದ ಅಲಿಪ್ತನೀತಿಗೆ ಶರಣಾದ ಕೇಂದ್ರ
ನವದೆಹಲಿ,
ಜೂ.22 : ಕರ್ನಾಟಕ ರಾಜ್ಯ ಹೊಗೇನಕಲ್ ಕುಡಿಯುವ ನೀರಿನ ಯೋಜನೆಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಹಿಂದೆ ಬರೀ ರಾಜಕೀಯ ಹಿತಾಶಕ್ತಿ ಕಂಡು ಬರುತ್ತಿದೆಯೇ ವಿನಃ ಮತ್ಯಾವ ಕಾರಣವೂ ಇಲ್ಲ ಎಂದು ಕೇಂದ್ರ ಸರಕಾರ ಉಲ್ಟಾ ಹೊಡೆದಿದ್ದು ಯೋಜನೆಯ ಮಧ್ಯಪ್ರವೇಶಕ್ಕೆ ನಿರಾಶಕ್ತಿತೋರಿದೆ. id="toptextpromo">ಈ
ಹಿಂದೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವುದಕ್ಕೆ ತಮಿಳುನಾಡು ಆಕ್ಷೇಪ ಎತ್ತಿತ್ತು. ನಂತರ ತನ್ನ ನಿಲುವು ಬದಲಿಸಿ ಸಹಕಾರ ನೀಡಲಿಲ್ಲವೇ? ಹೊಗೇನಕಲ್ ಯೋಜನೆಗೆ ಕರ್ನಾಟಕ ಒಪ್ಪಿಗೆ ನೀಡಿತ್ತು. ಈಗ ಯೋಜನೆಯ ವಿರುದ್ದ ಚಕಾರ ತೆಗೆದಿರುವುದರಲ್ಲಿ ಯಾವ ಅರ್ಥವಿದೆ. ಹೊಗೇನಕಲ್ ಯೋಜನೆಗೆ ವಿರೋಧಿಸುತ್ತಿರುವ ನಿಮಗೆ ಕಳಸಾ ಬಂಡೂರಿ ಯೋಜನೆಗೆ ಗೋವಾ ಸರಕಾರ ಅಡ್ಡಿ ಮಾಡಬಾರದೆಂದು ಹೇಳುವ ನೈತಿಕ ಹಕ್ಕು ಇದೆಯೇ ಎಂದು ಕೇಂದ್ರ ಖಾರವಾಗಿ ಪ್ರಶ್ನಿಸಿದೆ. id='are-slot-1' class='oiad oi-axt oiadv'> id='top-searched-articles'>ತಮಿಳುನಾಡು
ಅಕ್ರಮವಾಗಿ ಹೊಗೇನಕಲ್ ಯೋಜನೆ ಕೈಗೊಂಡಿದೆ. ಕಾಮಗಾರಿಯನ್ನು ತಕ್ಷಣ ತಡೆ ಹಿಡಿಯ ಬೇಕೆಂದು ಕರ್ನಾಟಕ ಕೇಂದ್ರಕ್ಕೆ ಒತ್ತಡ ನೀಡುತ್ತಿದ್ದರೆ, ಈ ಯೋಜನೆಗೆ ಕರ್ನಾಟಕದ ಕಿರಿಕಿರಿ ತಪ್ಪಿಸುವಂತೆ ತಮಿಳುನಾಡು ದುಂಬಾಲು ಬಿದ್ದಿದೆ. ಆದರೆ ಇದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಯುಪಿಎ ಸರಕಾರ, ಸದ್ಯಕ್ಕಂತೂ ಈ ವಿವಾದದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಜಲಸಂಪನ್ಮೂಲ ಖಾತೆ ಸ್ಪಷ್ಟ ಪಡಿಸಿದೆ ಎನ್ನಲಾಗಿದೆ.











Click it and Unblock the Notifications