ಮೇತಾಸ್ ಗೂ ಬಿನ್ ಲಾಡೆನ್ ಗೂ ನಂಟು!

ಮೇತಾಸ್ ಸತ್ಯಂ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ಕೋಟ್ಯಂತರ ರೂ. ಅವ್ಯವಹಾರ ಎಸಗಿ ಜೈಲು ಸೇರಿರುವ ರಾಮಲಿಂಗರಾಜು ಅವರ ಮತ್ತೊಂದು ಕೂಸು. ಇಂತಹ ಸಂಸ್ಥೆಯಲ್ಲಿ ಸೌದಿ ಅರೇಬಿಯಾ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆ ಸೌದಿ ಬಿನ್‌ಲಾಡೆನ್‌ಗ್ರೂಪ್(SBG) ಈಕ್ವಿಟಿ ಆಧಾರದ ಮೇಲೆ ಶೇ.20ರಷ್ಟುಷೇರು ಪಡೆಯಲಿದೆ.
ಶೇಖ್ ಮೊಹಮ್ಮದ್ ಬಿನ್ ಲಾಡೆನ್‌ನಿಂದ 1931ರಲ್ಲಿ ಸೌದಿ ಬಿನ್‌ಲಾಡೆನ್ ಗ್ರೂಪ್ ಅಸ್ತಿತ್ವಕ್ಕೆ ಬಂದಿತ್ತು. ಇದರ ಮಾಲೀಕ ಶೇಖ್ ಮೊಹಮ್ಮದ್ ಬಿನ್ ಲಾಡೆನ್, ವಿಶ್ವದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್‌ಲಾಡೆನ್ ಈತನ ಪುತ್ರ.ಮೇತಾಸ್‌ನ 1.54 ಕೋಟಿ ಈಕ್ವಿಟಿ ಷೇರುಗಳನ್ನು ಎಸ್‌ಬಿಜಿ ಸಂಸ್ಥೆಗೆ ನೀಡಲು ಮೇತಾಸ್ ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ.
ಅಮೆರಿಕದ ಅವಳಿ ಗೋಪುರದ ಮೇಲಿನ ದಾಳಿ(7/11 ದಾಳಿ) ಪ್ರಕರಣದ ರೂವಾರಿಯಾದ ಒಸಾಮಾ ಬಿನ್ ಲಾಡೆನ್ ಸದ್ಯ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ. ಈತನ ಸೆರೆಗಾಗಿ ಅಮೆರಿಕ ಬಲೆ ಬೀಸಿದೆ.
ಪಾಕ್ ಹಾಗೂ ಅಫ್ಘಾನಿಸ್ಥಾನದ ಗುಡ್ಡಗಾಡು ಪ್ರದೇಶದಲ್ಲಿ ಈತನಿಗಾಗಿ ಇಂದಿಗೂ ಶೋಧ ಕಾರ್ಯ ಮುಂದುವರೆದಿದೆ. ಆದರೆ, ಎಸ್ ಬಿಜಿ ಸಮೂಹದಿಂದ ಬಿನ್ ಲಾಡೆನ್ ಅನ್ನು 1994ರಲ್ಲೇ ಹೊರ ಹಾಕಲಾಗಿದೆ ಎಂಬ ಸುದ್ದಿಯೂ ಇದೆ.












Click it and Unblock the Notifications