ನಿತ್ಯಾನಂದ ಟ್ರಸ್ಟ್ ಗಳ ಬ್ಯಾಂಕ್ ವ್ಯವಹಾರ ಸುಗಮ
ಬೆಂಗಳೂರು,
ಜೂ.19: ಬಿಡದಿ ಧ್ಯಾನಪೀಠದ ನಿತ್ಯಾನಂದ ಒಡೆತನದ 4 ಟ್ರಸ್ಟ್ ಗಳ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲು ನೀಡಿದ್ದ ಆದೇಶ ವಾಪಸ್ ತೆಗೆದುಕೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಈ ಮೂಲಕ ಧ್ಯಾನಪೀಠ ಆಶ್ರಮ ನಿರಾಳವಾಗಿದೆ. id="toptextpromo">ರಾಸಲೀಲೆ
ಪ್ರಕರಣದ ನಂತರ ನಿತ್ಯಾನಂದ ಟ್ರಸ್ಟ್ ಗೆ ಸೇರಿದ್ದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಇದನ್ನು ವಿರೋಧಿಸಿ ಟ್ರಸ್ಟ್ ನವರು ಹೈಕೋರ್ಟ್ ಮೆಟ್ಟಿಲೇರಿದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಅಜಿತ್ ಜೆ ಗುಂಜಾಲ್ ಅವರಿದ್ದ ಪೀಠ ಮೇಲಿನಂತೆ ಆದೇಶ ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ಸರಕಾರ
ತನ್ನ ಆದೇಶವನ್ನು ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಟ್ರಸ್ಟ್ ಗಳು ಕೂಡ ಅರ್ಜಿಯನ್ನು ಹಿಂಪಡೆದಿವೆ. ಕಳೆದ ಒಂದೂವರೆ ತಿಂಗಳಿಂದ ಬ್ಯಾಂಕ್ ವಹಿವಾಟು ನಡೆಯದೆ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಆಶ್ರಮ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.











Click it and Unblock the Notifications