ಮೊಬೈಲ್ ಜಾಲಕ್ಕೆ ಬಿದ್ದ 11 ಮಿಲಿಯನ್ ಗ್ರಾಹಕರು

ಸೆಲ್ಯುಲಾರ್ ಆಪರೇಟರ್‍ಸ್ ಅಸೋಸಿಯೇಷನ್(COI) ಅಂಕಿ ಅಂಶಗಳ ಪ್ರಕಾರ ಇದರಿಂದ ದೇಶದ ಸೆಲ್ಯುಲಾರ್ ಗ್ರಾಹಕರ ಸಂಖ್ಯೆ 444 ಮಿಲಿಯನ್ ಗಳಿಗೇರಿದೆ. ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಕಂಪೆನಿ ಭಾರ್ತಿ ಏರ್ ಟೆಲ್ ಮೇ ನಲ್ಲಿ 3 ಮಿಲಿಯನ್ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಗ್ರಾಹಕರ ಸಂಖ್ಯೆ 133.6 ಮಿಲಿಯನ್ ಗಳಿಗೇರಿದೆ.
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರ್ತಿ ಪಾಲು ಶೇ.30 ಆಗಿದ್ದು ಇದರ ಪ್ರತಿಸ್ಪರ್ಧಿ ವೊಡಾಫೋನ್ ಎಸ್ಸಾರ್ ಮೇ ತಿಂಗಳಿನಲ್ಲಿ 2.59 ಗ್ರಾಹಕರನ್ನು ಸೆಳೆದಿದ್ದು ಇದರ ಒಟ್ಟು ಗ್ರಾಹಕರ ಸಂಖ್ಯೆ 106.3 ಮಿಲಿಯನ್ ಗಳಿಗೇರಿದೆ. ಕಳೆದ ಮೇ ತಿಂಗಳಿನಲ್ಲಿ ಐಡಿಯಾ ಸೆಲ್ಯುಲಾರ್ 1.4 ಮಿಲಿಯ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಗ್ರಾಹಕರ ಸಂಖ್ಯೆಯನ್ನು 66.72 ಮಿಲಿಯನ್ ಗಳಿಗೇರಿಸಿದೆ.
ಮಲೇಷ್ಯಾದ ಕಂಪೆನಿಯೊಂದು ಬಹುಪಾಲು ಹೊಂದಿರುವ ಏರ್ ಸೆಲ್ 1.6 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಗ್ರಾಹಕರ ಸಂಖ್ಯೆ 40.07 ಮಿಲಿಯನ್ ಗಳಿಗೇರಿದೆ. ಸರ್ಕಾರೀ ಸ್ವಾಮ್ಯದ ಬಿ ಎಸ್ ಎನ್ ಎಲ್ 1.04 ಮಿಲಿಯನ್ ಹಾಗೂ ಎಮ್ ಟಿ ಎನ್ ಎಲ್ 40,297 ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ .
ಇದರಿಂದ ಬಿ ಎಸ್ ಎನ್ ಎಲ್ ನ ಒಟ್ಟು ಗ್ರಾಹಕರ ಸಂಖ್ಯೆ 65.79 ಮಿಲಿಯನ್ ಮತ್ತು ಎಮ್ ಟಿ ಎನ್ ಎಲ್ ನ ಗ್ರಾಹಕರ ಸಂಖ್ಯೆ 4.85 ಮಿಲಿಯನ್ ಗಳಿಗೇರಿದೆ . ಅಸೋಸಿಯೇಷನ್ ರಿಲಯನ್ಸ್ ಕಮ್ಯನಿಕೇಷನ್ಸ್ ನ ಅಂಕಿ ಅಂಶಗಳನ್ನು ನೀಡಿಲ್ಲ .
ಭಾರತ ಮೊಬೈಲ್ ಸೇವಾ ರಂಗದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಆಗಿದ್ದು 15 ಆಪರೇಟರ್ ಗಳಿದ್ದಾರೆ. ಪ್ರತೀ ತಿಂಗಳು 14-15 ಮಿಲಿಯನ್ ಜಿ ಎಸ್ ಎಮ್ ಮತ್ತು ಸಿ ಡಿ ಎಮ್ ಎ ಗ್ರಾಹಕರು ಸೇರ್ಪಡೆಗೊಳ್ಳುತ್ತಿದ್ದಾರೆ.












Click it and Unblock the Notifications