ಬೆಳಗಾವಿಗೂ ವಾಜಪೇಯಿ ಆರೋಗ್ಯ ಶ್ರೀ: ರೆಡ್ಡಿ

Sri Ramulu
ಬಳ್ಳಾರಿ, ಜೂ.17:'ವಾಜಪೇಯಿ ಆರೋಗ್ಯ ಶ್ರೀ' ಯೋಜನೆಯನ್ನು ಆಗಸ್ಟ್ ತಿಂಗಳಿನಲ್ಲಿ ಬೆಳಗಾವಿ ವಿಭಾಗಕ್ಕೂ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ಜಿ. ಜನಾರ್ಧನ ರೆಡ್ಡಿ ಅವರು ತಿಳಿಸಿದ್ದಾರೆ.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ವಿಮ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರ ಸಂಯುಕ್ತಾಶ್ರಯಲ್ಲಿ ಮುನಿಸಿಪಲ್ ಮೈದಾನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಬೃಹತ್ ಉಚಿತ ತಪಾಸಣಾ ಶಿಬಿರದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬಡವರಿಗೆ ವರದಾನ: ಈ ಯೋಜನೆಯು ಬಡವರಿಗೆ ವರವಾಗಿದೆ. ಈ ಯೋಜನೆಯಡಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡವರು ಅತ್ಯುತ್ತಮ ದರ್ಜೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಡಿ ಫಲಾನುಭವಿಗಳು ವಾರ್ಷಿಕವಾಗಿ ಗರಿಷ್ಠ 2 ಲಕ್ಷ ರೂ. ವೆಚ್ಚದವರೆಗೆ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು ಎಂದರು.

ಈ ಯೋಜನೆಯಿಂದ ಬಡವರ ಆರೋಗ್ಯ ಸುಧಾರಣೆಯಾಗುವುದುದಲ್ಲದೇ ಅವರ ವೈದ್ಯಕೀಯ ವೆಚ್ಚವೂ ಉಳಿತಾಯವಾಗಲಿದೆ. ಪ್ರಸ್ತುತ ಈ ಯೋಜನೆಯು ಗುಲ್ಬರ್ಗಾ ವಿಭಾಗದಲ್ಲಿ ಮಾತ್ರ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಯನ್ನು ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಆಗಸ್ಟ್‌ನಲ್ಲಿ ವಿಸ್ತರಿಸಲಾಗುತ್ತದೆ ಎಂದರು.

ಸಂಸದೆ ಶ್ರೀಮತಿ ಜೆ. ಶಾಂತ ಅವರು ಮಾತನಾಡಿ, ಆರೋಗ್ಯವೇ ಮಹಾ ಭಾಗ್ಯ. ಆರೋಗ್ಯ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನುಷ್ಠಾನ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡಿ ವಿನೂತನ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು, ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿರುವ ಸಚಿವ ಶ್ರೀರಾಮುಲು ಅವರು ಬಡವರಿಗೆ ಸಂಜೀವಿನಿ. ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾವಿರಾರು ಬಡವರ ಜೀವ ಉಳಿಸಿದ್ದಾರೆ.

ಆರೋಗ್ಯ ಕವಚ ಯಶಸ್ವಿ: ಅನಾರೋಗ್ಯದಿಂದ ಬಳುತ್ತಿರುವವರಿಗೆ ನೇರವಾಗಿ ಸಂಚಾರಿ ಚಿಕಿತ್ಸಾ ಘಟಕಗಳ ಮೂಲಕ ಮನೆಗೆ ಬಂದು ಚಿಕಿತ್ಸೆ ನೀಡುವ ೧೦೪ ಯೋಜನೆಯನ್ನು ಶೀಘ್ರದಲ್ಲೇ ಜಾರಿ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದರು.

ಈಗಾಗಲೇ ಆರೋಗ್ಯ ಕವಚ 108 ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಈವರೆಗೆ 1.32 ಕೋಟಿ ಕರೆಗಳು ಬಂದಿದ್ದು, ಐದೂವರೆ ಲಕ್ಷ ಜನರ ಪ್ರಾಣ ಉಳಿದಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+