ದುಡ್ಡಿಗಾಗಿ ಕೋಚ್ ಆದ ಮರಡೋನಾ: ಪೀಲೆ
ಸರ್ವಕಾಲಿಕ ಉತ್ತಮ ಆಟಗಾರರಾದ ಪೀಲೆ ಮತ್ತು ಮರಡೋನಾ, ಪರಸ್ಪರ ಟೀಕೆಗಳಲ್ಲಿ ತೊಡಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾಕರ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮರಡೋನಾ, 'ಕಪ್ಪು ಮನುಷ್ಯ'(dark gentleman)ನಾದ ಪೀಲೆ ಎಂದು ಜರಿದಿದ್ದರು. ಮರಡೋನಾ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಪೀಲೆ, ನನಗೆ ಕೆಲವು ಸಂಗತಿಗಳು ಅರ್ಥವಾಗುತ್ತಿಲ್ಲ.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ
ಮರಡೋನಾ 2005 ರಲ್ಲಿ ಟೆಲಿವಿಜನ್ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ ನೆರವು ಅಗತ್ಯವಿದೆ ಎಂದು ಕೇಳಿದ್ದರು. ಅವರ ಮನವಿಗೆ ಸ್ಪಂದಿಸಿ, ನಾನು ಬೊನಸ್ ಐರಿಸ್‌ಗೆ ತೆರಳಿ ಕೆಲ ಫುಟ್ಬಾಲ್ ಪಂದ್ಯಗಳನ್ನಾಡಿ ಅವರನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತಂದಿದ್ದೆ ಎನ್ನುವುದುಮರೆಯಬಾರದು. ಅದಲ್ಲದೆ, ಕೆಲ ಜಾಹೀರಾತುಗಳಲ್ಲಿ ಅವಕಾಶ ನೀಡುವ ಮೂಲಕ ಅವರಿಗೆ ನಾನು ನೆರವಾಗಲು ಯತ್ನಿಸಿದೆ.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
ಆದರೆ ನಂತರ ಮರಡೋನಾ ನನ್ನನ್ನು ಮರೆತುಹೋದರು. ಇದೀಗ ದಕ್ಷಿಣ ಆಫ್ರಿಕಾದಲ್ಲಿ ನನ್ನ ನೆನಪು ಬಂದಿದೆ.ಮರಡೋನಾ ನನ್ನನ್ನು ಪ್ರೀತಿಸಲೇ ಬೇಕು ಎಂದು ಪೀಲೆ ವ್ಯಂಗವಾಡಿದ್ದಾರೆ. 2008 ರಲ್ಲಿ ಮರಡೋನಾ ಅರ್ಜೆಂಟೀನಾದ ಕೋಚ್ ಆಗಿ ಆಯ್ಕೆ ಯಾದಾಗಲೂ ಪೀಲೆ , ಅರ್ಜೆಂಟೀನಾ ಫೆಡರೇಷನ್ ನ ಅಧ್ಯಕ್ಷ ಜೂಲಿಯೊ ಗ್ರಾಂಡೊನಾ ಅವರ ವಿರುದ್ಧ ಕಿಡಿಕಾರಿದ್ದರು.












Click it and Unblock the Notifications