ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾದಿಂದ ಇಂಟರ್ನೆಟ್ ಟ್ರಾಫಿಕ್ ಹೆಚ್ಚಳ

By Prasad
|
Google Oneindia Kannada News

FIFA fever increases internet traffic
ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಿರುವ ಫೀಫಾ ವಿಶ್ವಕಪ್ 2010 ಫುಟ್ಬಾಲ್ ಕ್ರೀಡಾ ಪ್ರೇಮಿಗಳಲ್ಲಿ ಮಾತ್ರ ಕ್ರೀಡೋನ್ಮಾದ ಏರಿಸಿಲ್ಲ, ಫುಟ್ಬಾಲ್ ಹಬ್ಬ ಆರಂಭವಾದ ದಿನ ಜೂನ್ 11ರಂದು ಇಂಟರ್ನೆಟ್ಟಿನಲ್ಲಿ ಕೂಡ ದಾಖಲೆ ಸ್ಥಾಪಿಸಿದೆ.

ಶುಕ್ರವಾರ, ವಾರಾಂತ್ಯದಲ್ಲಿ ಪಂದ್ಯಾವಳಿ ಆರಂಭವಾದರೂ ವಿಶ್ವದಾದ್ಯಂತ ಜನರು ಫುಟ್ಬಾಲ್ ಸುದ್ದಿಗಳನ್ನು ಓದಲು ಇಂಟರ್ನೆಟ್ಟಿಗೆ ಅಂಟಿಕೊಂಡು ಕುಳಿತಿದ್ದರು. ಇಂಟರ್ನೆಟ್ ದಟ್ಟಣೆಯ ಲೆಕ್ಕ ಇಡುವ ಸಂಸ್ಥೆ ಅಕಾಮೈ ಅಧ್ಯಯನದ ಪ್ರಕಾರ, ಬೆಳಗಿನ ಜಾವದಿಂದಲೇ ಇಂಟರ್ನೆಟ್ ಟ್ರಾಫಿಕ್ ಏರಲು ಶುರು ಮಾಡಿ ಮಧ್ಯಾಹ್ನದ ಹೊತ್ತಿಗೆ ಪ್ರತಿ ನಿಮಿಷಕ್ಕೆ 12.1 ಮಿಲಿಯನ್ ನೆಟ್ ವೀಕ್ಷಕರು ಅಂತರ್ಜಾಲಕ್ಕೆ ದಾಳಿಯಿಟ್ಟಿದ್ದರು.

ಲಕ್ಷಗಟ್ಟಲೆ ಫುಟ್ಬಾಲ್ ಪ್ರೇಮಿಗಳು ಟಿವಿಯಲ್ಲಿ ವೀಕ್ಷಿಸಿದರೂ, ಇಂಟರ್ನೆಟ್ಟಿಗೆ ಅಂದು ಬಿಡುವೆಂಬುದು ಇರಲಿಲ್ಲ. ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಶುರುವಾಗುವ ಹೊತ್ತಿಗೆ ಇಂಟರ್ನೆಟ್ ದಟ್ಟಣ ಅತ್ಯಧಿಕವಾಗಿತ್ತು. ಇದು ಫ್ರಾನ್ಸ್ ಮತ್ತು ಉರುಗ್ವೆ ಪಂದ್ಯಕ್ಕೂ ಮುಂದುವರಿದಿತ್ತು. ತಾಜಾ ಸುದ್ದಿಗಳಿಗೆ, ರೋಚಕ ಕ್ಷಣಗಳಿಗಾಗಿ ಜಾಗತಿಕ ನೆಟ್ಟಿಗರು ಕಾದು ಕುಳಿತಿದ್ದರೆಂದು ಸಮೀಕ್ಷೆ ಹೇಳಿದೆ.

2008ರಲ್ಲಿ ಬರಾಕ್ ಒಬಾಮಾ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ಸಂದರ್ಭದಲ್ಲಿ ಪ್ರತಿನಿಮಿಷ 8.5 ಮಿಲಿಯನ್ ವೀಕ್ಷಕರು ಇಂಟರ್ನೆಟ್ಟಿಗೆ ಲಗ್ಗೆ ಇಟ್ಟಿದ್ದರು. ಫುಟ್ಬಾಲ್ ಪ್ರೇಮ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಭರ್ಜರಿ ಗೋಲು ಬಾರಿಸಿದೆ. ಫುಟ್ಬಾಲ್ ಪ್ರೇಮಿಗಳಲ್ಲಿ ಇಂಟರ್ನೆಟ್ ಜ್ವರ ಕ್ರಮೇಣ ಕಡಿಮೆಯಾದರೂ ಕಾವು ಇನ್ನೂ ಇಳಿದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X