ಭೋಪಾಲ್ ದುರಂತ; ಅರ್ಜುನ್ ಸಿಂಗ್ ವಿರುದ್ಧ ಕೇಸು
ಭೋಪಾಲ್,
ಜೂ.15: ಭೂಪಾಲ್ ವಿಷಾನಿಲ ದುರಂತಕ್ಕೆ ಸಂಭವಿಸಿದಂತೆ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್ ವಿರುದ್ಧ ಇಂದು ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. 1984ರಲ್ಲಿ ದುರಂತ ಸಂಭವಿಸಿದ ಬಳಿಕ ಯೂನಿಯನ್ ಕಾರ್ಬೈಡ್ ನ ಮುಖ್ಯಸ್ಥ ವಾರೆನ್ ಆಂಡರ್ಸನ್ ಪರಾರಿಯಾಗಲು ಅರ್ಜುನ್ ಸಿಂಗ್ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ. id="toptextpromo">ಭೋಪಾಲ್
ನ ಜಿಲ್ಲಾಧಿಕಾರಿ ಮೋನಿ ಸಿಂಗ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸ್ವರಾಜ್ ಪುರಿ ವಿರುದ್ಧವೂ ಪ್ರತ್ಯೇಕ ಕೇಸುಗಳನ್ನು ದಾಖಲಿಸಲಾಗಿದೆ. ಆಂಡರ್ಸನ್ ಪರಾರಿಯಲ್ಲಿ ಇವರೆಲ್ಲರ ಕೈವಾಡ ಇದೆ ಎಂದು ದೂರಲಾಗಿದೆ. ನ್ಯಾಯಾಲಯ ಜೂನ್ 29ಕ್ಕೆ ಈ ಮೊಕದ್ದಮೆಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. id='are-slot-1' class='oiad oi-axt oiadv'> id='top-searched-articles'>ವಕೀಲ
ಪುರ್ ಖಾನ್ ಖಾನ್ ಅವರು ನ್ಯಾಯಾಲಯಕ್ಕೆ ವೈಯಕ್ತಿದ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ದುರಂತ ಸಂಭವಿಸಿದ ಬಳಿಕ ಆಂಡರ್ಸನ್ ಅವರನ್ನು ಭೋಪಾಲ್ ನಿಂದ ಹೊರಗೆ ಕಳುಹಿಸಿದ ಅರ್ಜುನ್ ಸಿಂಗ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಳ್ಳಬೇಕು ಎಂದು ಅವರು ಪ್ರಧಾನ ದಂಡಾಧಿಕಾರಿ ಆರ್ ಜಿ ಸಿಂಗ್ ಅವರನ್ನು ವಿನಂತಿಸಿಕೊಂಡಿದ್ದಾರೆ.











Click it and Unblock the Notifications