ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾತಿ ವಿವಾಹಕ್ಕೆ ಕರವೇ ಪೌರೋಹಿತ್ಯ

By Mahesh
|
Google Oneindia Kannada News

Karave helps Inter Caste Marriage in Mandya
ಮಂಡ್ಯ, ಜೂ.13: ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪೌರೋಹಿತ್ಯ ವಹಿಸಿದ ಘಟನೆ ಶನಿವಾರ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಸನ್ನಿಧಿಯಲ್ಲಿ ನಡೆದಿದೆ. ಮದುವೆಯಾದ ವರ ಮಂಡ್ಯ ಜಿಲ್ಲಾ ಮೀಸಲು ಪಡೆ ಪೇದೆ ಎಂಬುದು ವಿಶೇಷ.

ಮದುವೆ ನಂತರ ಮಂಡ್ಯ ವೃತ್ತನಿರಕ್ಷಕ ಕಚೇರಿಗೆ ಕರವೇ ಕಾರ್ಯಕರ್ತರೊಂದಿಗೆ ತೆರಳಿದ ಯುವಜೋಡಿಗಳು ನಾವು ವಯಸ್ಕರಾಗಿದ್ದು ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆಂದು ತಿಳಿಸಿದರು.

ರಾಘವೇಂದ್ರ ಜಿಲ್ಲಾ ಸಶ್ತ್ರಸ್ತ್ರ ಮೀಸಲು ಪಡೆಯಲ್ಲಿ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು , ರೇಷ್ಮ ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.

ಮದುವೆಗೆ ಅಡ್ಡ ಬಂದ ಜಾತಿ: ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಪರಿಶಿಷ್ಟ ಜತಿಗೆ ಸೇರಿದ ಲಕ್ಷ್ಮಣ ಜಯಶೀಲ ಎಂಬುವವರ ಪುತ್ರ ರಾಘವೇಂದ್ರ(23) ಹಾಗೂ ಕ್ಯಾತುಂಗೆರೆ ಗ್ರಾಮದ ಒಕ್ಕಲಿಗರ ಜತಿಗೆ ಸೇರಿದ ಬೊಮ್ಮಲಿಂಗೇಗೌಡ ನಾಗಲಕ್ಷ್ಮೀ ಎಂಬುವವರ ಪುತ್ರಿ ರೇಷ್ಮ (20) ಎಂಬುವವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಕಳೆದ 4ದಿನಗಳ ಹಿಂದೆ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದ ರೇಷ್ಮಳ ಅಜ್ಜಿ ಮನೆಯಿಂದ ರಾಘವೇಂದ್ರ ಆಕೆಯನ್ನು ಕೊಂಡೊಯ್ದಿದ್ದು, ರೇಷ್ಮಳ ಪೋಷಕರು ಕೆರೆಗೊಡು ಪೊಲೀಸ್ ಠಾಣೆಗೆ ಅಪಹರಣದ ದೂರು ನೀಡಿದ್ದರು.

ಈ ನಡುವೆ ರಾಘವೇಂದ್ರ ಮತ್ತು ರೇಷ್ಮ ತಮ್ಮಿಬ್ಬರ ಮದುವೆ ಮಾಡಿಸಿ ಕೊಡುವಂತೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಶ್ರೀನಿವಾಸ್ ಮೊರೆ ಹೋಗಿದ್ದರು. ಅದರಂತೆ ಕರವೇ ಕಾರ್ಯಕರ್ತರು ಯುವ ಜೋಡಿಗಳಿಗೆ ವಿವಾಹ ಮಾಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X