ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್ ಹಬ್ಬದ ಸಂಭ್ರಮ ಆರಂಭ

By Prasad
|
Google Oneindia Kannada News

Heading football
ಬೆಂಗಳೂರು, ಜೂ. 11 : ಮುಂಗಾರು ಮಳೆಯನ್ನು ತಣ್ಣಗೆ ಸ್ವಾಗತಿಸಿರುವ ಮೋಡಾಚ್ಛಾದಿತ ಬೆಂಗಳೂರು ನಗರ ದೂರದ ದಕ್ಷಿಣ ಆಫ್ರಿಕಾದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ 19ನೇ ಫೀಫಾ ವಿಶ್ವಕಪ್ ಪಂದ್ಯಾವಳಿಗೆ ಪಾಪ್ ಕಾರ್ನ್ ಜೊತೆಗೆ'ಚೀಯರ್ಸ್' ಹೇಳಲು ಸಜ್ಜಾಗಿದೆ.

ಕ್ರಿಕೆಟ್ಟಿನ ಭರಾಟೆಯಲ್ಲಿ ಮುಳುಗಿಹೋಗಿದ್ದ ಭಾರತ ಕಾಲ್ಚೆಂಡಿನಾಟದ ವಿಷಯದಲ್ಲಿ ಜಗತ್ತಿಗೇ ಅಚ್ಚರಿ ಮೂಡಿಸಿದೆ. ವಿಶ್ವ ರ‌್ಯಾಂಕಿಂಗಿನಲ್ಲಿ 133ನೇ ಸ್ಥಾನದಲ್ಲಿದ್ದರೇನಾಯಿತು, 100 ಕೋಟಿ ಜನಸಂಖ್ಯೆಯನ್ನು ಮೀರಿರುವ ಭಾರತ ಫುಟ್ಬಾಲ್ ಆಟವನ್ನು ಹಿಂಬಾಲಿಸುವಲ್ಲಿ ಮೂರನೇ ಸ್ಥಾನದಲ್ಲಿದೆ.

ಗೂಗಲ್ ನಲ್ಲಿ ಫುಟ್ಬಾಲ್ ಸರ್ಚ್ ಮಾಡುವುದರಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಬೆಂಗಳೂರಿನ ಜನತೆ ಕೊಲ್ಕತಾ ಫುಟ್ಬಾಲ್ ಫೆನೆಟಿಕ್ ಗಳನ್ನು ಕೂಡ ಹಿಂದೆ ಹಾಕಿದ್ದಾರೆ. ಜಾಗತಿಕ ಫುಟ್ಬಾಲ್ ಹಬ್ಬವನ್ನು ಲೈವ್ ಆಗಿ ನೋಡಲು ಬೆಂಗಳೂರು ಅತ್ಯಂತ ಪ್ರಶಸ್ತ ಊರು ಎಂದು ಕೋಲ್ಕತಾದ ವೆಬ್ ಸೈಟೊಂದು ಹೇಳಿ ಬೆಂಗಳೂರಿಗರಿಗೆ ಕೋಡು ಮೂಡಿಸಿದೆ.

ಕಾಸ್ಮೋಪಾಲಿಟನ್ ನಗರಿ ಬೆಂಗಳೂರು ದೇಶದ ಎಲ್ಲಾ ಭಾಗಗಳಿಂದ ಜನರನ್ನು ಅಯಸ್ಕಾಂತದಂತೆ ಸೆಳೆದುಕೊಳ್ಳುತ್ತಿದೆ. ಜನರು ಕ್ರಿಕೆಟ್ಟಿನಿಂದ ದೂರ ಸರಿಯುತ್ತಿದ್ದು ಫಟ್ಬಾಲ್ ಪ್ರೀತಿಸುವ ಜನರ ಸಂಖ್ಯೆ ತ್ರಿಗುಣವಾಗಿದೆ. ಪಬ್ ಸಂಸ್ಕೃತಿ ಹಿಂದೆಂದಿಗಿಂತಲೂ ಕ್ರಿಯಾಶೀಲವಾಗಿದೆ. ಬಾರ್, ಪಬ್ ಮತ್ತು ರೆಸ್ಟೋರೆಂಟುಗಳು ಗಂಡು, ಹೆಣ್ಣು ಎಂಬ ಭೇದವೆಣಿಸದೆ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿವೆ. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ, ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನರಾಗಿ ಬಾರ್, ಪಬ್ ಪ್ರವೇಶಿಸುತ್ತಿದ್ದಾರೆ.

ಒಂದಾನೊಂದು ಕಾಲದಲ್ಲಿ ಭಾರತದ ಸಿಲಿಕಾನ್ ವ್ಯಾಲಿ, ಗಾರ್ಡನ್ ಸಿಟಿ, ನಿವೃತ್ತರ ಸ್ವರ್ಗ ಎಂದೆಲ್ಲ ಕರೆಸಿಕೊಂಡಿದ್ದ ಬೆಂಗಳೂರು ಈಗ 'ಸಿಟಿ ಆಫ್ ಪಬ್' ಎಂಬ ಹೆಗ್ಗಳಿಗೆ ಗಳಿಸಿ ತೇಲಾಡುತ್ತಿದೆ. ಹಾಗೆಯೇ, ಫುಟ್ಬಾಲ್ ವೀಕ್ಷಣೆಗಾಗಿ ಬೆಂಗಳೂರಿನ ಎಲ್ಲಾ ಪಬ್ ಗಳು ಕಾಕ್ಟೇಲ್ ಹಿಡಿದುಕೊಂಡು ಸ್ವಾಗತಕ್ಕೆ ನಿಂತಿವೆ. ಎಡಗೈಯಲ್ಲಿ ಪಿಂಟ್ ಆಫ್ ಬೀಯರ್ ಹಿಡಿದುಕೊಂಡು ಬಲಗೈಯಿಂದ ಪಾಪ್ ಕಾರ್ನ್, ಕಡ್ಲೆಬೀಜಗಳನ್ನು ಮೆಲ್ಲುತ್ತ ಕಾಲ್ಚಳಕದ ಮಾಂತ್ರಿಕತೆ ನೋಡಲು ಯುವಕ ಯುವತಿಯರು ಕಾತರದಿಂದಿದ್ದಾರೆ.

ಸಂಗಾತಿಯ ಜೊತೆ ಹೋಗಿ ರಾಕ್ ಸಂಗೀತಕ್ಕೆ ಕುಣಿಯುತ್ತ, ಸ್ವಾದಿಷ್ಟವಾದ ಆಹಾರವನ್ನು ತಿನ್ನುತ್ತ, ಬೇಕಿದ್ದರೆ ಬೀಯರು ಇಲ್ಲದಿದ್ದರೆ ಫುಟ್ಬಾಲ್ ಪಂದ್ಯಗಳಿಗೆ ಚೀಯರ್ಸ್ ಹೇಳಲು ಬೆಂಗಳೂರಿನ ದೊಡ್ಡ ಪಬ್ ಗಳಿಗಿಂದ ಅತ್ಯುತ್ತಮವಾದ ಜಾಗ ಇನ್ನೊಂದಿಲ್ಲ. ಟಾವರ್ನ್, ಪರ್ಪಲ್ ಹೇಜ್, ಲೀ ರಾಕ್, ನಾಸಾ, ನೂನ್ ವೈನ್ಸ್, ಸ್ಕಾಟಿಷ್ ಪಬ್ ಫಿರಂಗಿ ಪಾನಿ, ಹಾರ್ಡ್ ರಾಕ್ ಕೆಫ್ ಯಾವ್ದು ಬೇಕೋ ಆಯ್ದುಕೊಳ್ಳಿ. ಆದರೆ, ಹಿಂತಿರುಗಿ ಮನೆ ಸೇರುವಾಗ ಮಾತ್ರ ಜೋಪಾನ. ಮರುದಿನ ಮತ್ತೊಂದು ಫುಟ್ಬಾಲ್ ಮ್ಯಾಚನ್ನು ನೋಡಬೇಕಲ್ಲ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X