ಬಜ್ಪೆ ವಿಮಾನ ನಿಲ್ದಾಣದಲ್ಲಿ ತಪ್ಪಿದ ಮತ್ತೊಂದು ದುರಂತ

ಮೇ 22ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಕಣ್ಮುಂದೆಯಿಂದ ಸರಿಯುವ ಮುನ್ನವೇ ಇಂದು ಮತ್ತೊಂದು ಅವಘಡ ಸಂಭವಿಸಲಿತ್ತು. ಇದೂ ಕೂಡ ಏರ್ ಇಂಡಿಯಾ ವಿಮಾನವೇ.
ಮಂಗಳೂರಿನಿಂದ ಅಬುಧಾಬಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುವಾಗ ರನ್ ವೇಯಿಂದ ಬದಿಗೆ ಸರಿದಿದೆ. ಆದರೆ, ಚಾಲಕನ ಚಾಣಾಕ್ಷತನದಿಂದ ಮತ್ತೊಂದು ಭಾರೀ ಅವಘಡ ತಪ್ಪಿದಂತಾಗಿದೆ. ವಿಮಾನದಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ವಿಮಾನ ನಿಲ್ದಾಣದಲ್ಲಿ ಮತ್ತು ವಿಮಾನದಲ್ಲಿದ್ದ ಪ್ರಯಾಣಿಕರು ಈ ಅವಘಡದಿಂದ ಆಘಾತಕ್ಕೊಳಗಾಗಿದ್ದಾರೆಂದು ತಿಳಿದುಬಂದಿದೆ. ಬಜ್ಪೆ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಲಾಗಿದೆ.
ಮೇ 22ರಂದು ಅಪಘಾತ ನಡೆದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಬಜ್ಪೆ ವಿಮಾನ ನಿಲ್ದಾಣ ಅಷ್ಟೊಂದು ಸುರಕ್ಷಿತವಾಗಿಲ್ಲ. ವಿಮಾನ ಚಾಲಕರಿಗೆ ಇಲ್ಲಿ ವಿಮಾನ ಹಾರಿಸುವುದು ನಿಜಕ್ಕೂ ಸವಾಲಿನದು ಎಂದು ಪ್ರತಿಕ್ರಿಯಿಸಿದ್ದರು.












Click it and Unblock the Notifications