ಸಂಪುಟ ವಿಸ್ತರಣೆ ಅಧಿಕೃತ ಗಾಳಿಮಾತು!
ಬೆಳಗಾವಿ,
ಜೂ. 8: ಸಚಿವ ಸಂಪುಟದ ವಿಸ್ತರಣೆ ಸದ್ಯದಲ್ಲೇ ಮಾಡಲಾಗುವುದು ಎಂಬ ಸುಳಿವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲಾಗುವುದು ಆದರೆ ಇಂಥವರನ್ನೇ ಸಚಿವರನ್ನಾಗಿ ನೇಮಕ ಮಾಡುವ ಅಥವಾ ಇಂಥವರನ್ನೇ ಸಂಪುಟದಿಂದ ಕೈಬಿಡುವ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಸಂಪುಟ ವಿಸ್ತರಣೆ ಸುದ್ದಿಯನ್ನು ಕೊಕ್ಕೆಯಲ್ಲಿ ಇಟ್ಟಿದ್ದಾರೆ. id="toptextpromo">ಬೆಳಗಾವಿಯಲ್ಲಿ
ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸುತ್ತಿರುವ ಬಿಎಸ್ ವೈ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡುತ್ತಾ ವಿಸ್ತರಣೆ ವಿಷಯವನ್ನು ಮುಗುಂ ಆಗಿ ಪ್ರಸ್ತಾಪಿಸಿದರು. ಶಾಸಕರನ್ನು ಸಚಿವರನ್ನಾಗಿ ನೇಮಿಸುವ ಮತ್ತು ಈಗಿರುವ ಸಚಿವರನ್ನು ಕೈಬಿಡುವ ಬಗ್ಗೆ ಹೈಕಮಾಂಡಿನೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಅಲ್ಲಿಯತನಕ ಯಾರ ಹೆಸರನ್ನೂ ಬಹಿರಂಗಗೊಳಿಸಲಾರೆನು ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು. id='are-slot-1' class='oiad oi-axt oiadv'> id='top-searched-articles'>ಸದ್ಯಕ್ಕೆ
ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಹೊಡೆಯುತ್ತಿವೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಕಿರು ಮೀಸೆಯ ಹುಡುಗ ಪ್ರಿಯಕೃಷ್ಣನಿಗೆ ಸೋತ ಮಂತ್ರಿ ವಿ ಸೋಮಣ್ಣ ಮತ್ತು ಶಿವಮೊಗ್ಗದಲ್ಲಿ ಸ್ನೇಹಿತರ ಹೆಂಡತಿಯೊಂದಿಗೆ ಏನೋ ಮಾಡಲು ಹೋಗಿ ಇನ್ನೇನೋ ಆದ ಆಹಾರ ಸಚಿವ ಹರತಾಳು ಹಾಲಪ್ಪ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಗಳನ್ನು ಯಡ್ಡಿ ತುಂಬಬೇಕಾಗಿದೆ. ಸಚಿವರಾಗಲು ಬಯಸಿ ತುದಿಗಾಲಲ್ಲಿ ನಿಂತಿರುವ ಬೆಜೆಪಿ ಶಾಸಕರ ಪಟ್ಟಿ ತುಂಬ ಉದ್ದ ಇರುವುದರಿಂದ ಅವರ್ಯಾರ ಹೆಸರುಗಳನ್ನು ಇಲ್ಲಿ ಬರೆದಿರುವುದಿಲ್ಲ.











Click it and Unblock the Notifications