ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಜಿಒಗಳ ಪಾರದರ್ಶಕತೆಗೆ ನಿಯಮ : ಮೋದಿ

By Mahesh
|
Google Oneindia Kannada News

Narendra Modi
ಮುಂಬೈ, ಜೂ.6:ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಂಬಂಧ ಚೆನ್ನಾಗಿಲ್ಲದಿರುವುದು ಲೋಕಕ್ಕೆ ಗೊತ್ತಿರುವ ಸಂಗತಿ. ಶನಿವಾರ ಮುಖ್ಯಮಂತ್ರಿ ಮೋದಿ ಸರ್ಕಾರೇತರ ಸಂಸ್ಥೆ(ಎನ್ ಜಿಒ)ಗಳ ವಿರುದ್ಧ ಚಾಟಿ ಬೀಸಿದ್ದಾರೆ.

ಉತ್ತಮ ಆಡಳಿತದ ಕುರಿತು ಮುಂಬೈ ಹೊರವಲಯದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಮೋದಿ ಅವರು ಎನ್ ಜಿಒ, ಸ್ವಯಂಸೇವಾ ಹಾಗೂ ಸರ್ಕಾರೇತರ ಸಂಸ್ಥೆಗಳ ಲೆಕ್ಕಪತ್ರ ದ ಕುರಿತು ಪರಿಶೀಲನೆ ಮಾಡುವ ಅವಶ್ಯಕತೆಯನ್ನು ಒತ್ತಿ ಹೇಳಿದರು.

ತಾವು ಕಾವಲುಗಾರರೆನ್ನುವ ಇವರ ಕಾವಲನ್ನು ಯಾರು ಕಾಯಬೇಕು ಎಂದು ಮೋದಿ ಪ್ರಶ್ನಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಲು ಮೋದಿ ನಿರಾಕರಿಸಿದರು. ಮೋದಿಯ ಭಾಷಣದ ಲಿಖಿತ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು.

ಸರ್ಕಾರೇತರ ಸಂಸ್ಥೆಗಳಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಅವುಗಳ ಲೆಕ್ಕ ಪತ್ರ ಪರಿಶೀಲಿಸಲು ವ್ಯವಸ್ಥೆಯೊಂದರ ಅವಶ್ಯಕತೆಯನ್ನು ಒತ್ತಿ ಹೇಳಿದ ಮೋದಿ, ಉತ್ತಮ ಆಡಳಿತದಲ್ಲಿ ಮಾಧ್ಯಮದ ಪಾತ್ರದ ಬಗ್ಗೆಯೂ ಮಾತನಾಡಿ ಸರ್ಕಾರದ ವೈಫಲ್ಯಗಳನ್ನು ದೊಡ್ಡದು ಮಾಡುವುದರ ಜತೆಗೇ ಉತ್ತಮ ಕಾರ್ಯಗಳಿಗೂ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಕಿವಿಮಾತು ಹೇಳಿದರು.

ಭ್ರಷ್ಟಾಚಾರವನ್ನು ತಗ್ಗಿಸಲು 2005ರ ಮಾಹಿತಿ ಹಕ್ಕು ಕಾಯ್ದೆ ಉತ್ತಮ ಕೆಲಸ ಮಾಡುತ್ತಿದೆ ಎಂದ ಮೋದಿ ಅವರು ಕೆಲ ಮದ್ಯವರ್ತಿಗಳು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳನ್ನು ಹೆದರಿಸುವ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X