ಗಲ್ಲು ಶಿಕ್ಷೆ ಪ್ರಶ್ನಿಸಲು ಕಸಬ್ ಗೆ ಲಾಯರ್ ಬೇಕಂತೆ
ಮುಂಬೈ,
ಜೂ.4: ಗಲ್ಲು ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಹಾಗೂ ತಮ್ಮ ಪರ ವಾದಿಸಲು ವಕೀಲರೊಬ್ಬರು ಬೇಕು ಎಂಬ ಬೇಡಿಕೆಯನ್ನು ಮುಂಬೈ ದಾಳಿಕೋರ ಉಗ್ರ ಅಜ್ಮಲ್ ಕಸಬ್ ಜೈಲು ಅಧಿಕಾರಿಗಳ ಮುಂದಿಟ್ಟಿದ್ದಾನೆ. ತಮ್ಮ ಪರ ವಾದಿಸಲು ವಕೀಲರೊಬ್ಬರನ್ನು ನೇಮಿಸಿ ಎಂದು ಕಸಬ್ ಮನವಿ ಮಾಡಿಕೊಂಡಿದ್ದಾನೆ. id="toptextpromo">ಕಸಬ್
ನ ಬೇಡಿಕೆಯನ್ನು ಪುರಸ್ಕರಿಸುವುದಕ್ಕೂ ಮುನ್ನ ಮಹಾರಾಷ್ಟ್ರ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಸ್ಥ ಹಾಗೂ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜೆ ಎನ್ ಪಟೇಲ್ ಅವರಿಗೆ ರವಾನಿಸಲಾಗಿದೆ. ಕಾನೂನು ಸೇವಾ ಸಮಿತಿಯ ಮುಖ್ಯಸ್ಥ ಜಸ್ಟೀಸ್ ರಂಜನ ದೇಸಾಯಿ ಅವರಿಗೂ ಕಸಬ್ ನ ಬೇಡಿಕೆಯ ಪ್ರತಿಯೊಂದನ್ನು ಕಳುಹಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಮುಂಬೈ
ಭಯೋತ್ಪಾದಕ ಕೃತ್ಯದಲ್ಲಿ ದೋಷಿಯಾಗಿದ್ದ ಪಾಕಿಸ್ತಾನದ ಉಗ್ರ ಪಾಪಿ ಅಜ್ಮಲ್ ಕಸಬ್ ನಿಗೆ ಮುಂಬೈ ವಿಶೇಷ ನ್ಯಾಯಾಲಯ ಮೇ.6ರಂದು ಮರಣದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಈ ಮೂಲಕ ಮುಂಬೈ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಅತ್ಮಕ್ಕೆ ಶಾಂತಿ ದೊರೆಕಿದ್ದು, ಭಾರತೀಯರ ಒತ್ತಾಯ ಕೊನೆಗೂ ಕೈಗೂಡಿದಂತಾಗಿತ್ತು.











Click it and Unblock the Notifications