ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಉಪಕರಣಗಳ ಆಮದಿಗೆ ಅಸ್ತು

By Mahesh
|
Google Oneindia Kannada News

India to allow Chinese gear after checks
ನವದೆಹಲಿ, ಜೂ.2: ಸರ್ಕಾರಿ ಹಾಗೂ ಖಾಸಗಿ ಟೆಲಿಕಾಂ ಕಂಪೆನಿಗಳು ಚೀನಾದ ಟೆಲಿಕಾಂ ಉಪಕರಣಗಳನ್ನು ಖರೀದಿಸುವುದಕ್ಕೆ ಭದ್ರತಾ ಕಾರಣಗಳಿಂದಾಗಿ ನಿರ್ಬಂಧ ಹೇರಿದ್ದ ಸರ್ಕಾರ ಬುಧವಾರ ಚೀನಾದ ಉಪಕರಣಗಳನ್ನು ಅಂತರ್ರಾಷ್ಟ್ರೀಯ ಭದ್ರತಾ ಕಂಪೆನಿಗಳ ತಪಾಸಣೆಯ ನಂತರ ಆಮದು ಮಾಡಿಕೊಳ್ಳುವದಕ್ಕೆ ಒಪ್ಪಿಗೆ ನೀಡಲಿದೆ

ಪ್ರಧಾನ ಮಂತ್ರಿಗಳ ಕಛೇರಿ, ಗೃಹ ಸಚಿವಾಲಯ, ದೂರ ಸಂಪರ್ಕ ಸಚಿವಾಲಯ, ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಸರ್ಕಾರ ಈ ಹಿಂದೆ ಚೀನಾದ ಜೆಡ್ ಟಿ ಈ ಮತ್ತು ಹ್ಯುವೈ ಕಂಪೆನಿಗಳ ಉಪಕರಣಗಳನ್ನು ಆಮದು ಮಾಡಿಕೊಳ್ಳುವದಕ್ಕೆ ನಿರ್ಬಂಧ ಹೇರಿತ್ತು.

ಅಲ್ಲದೆ ಸರ್ಕಾರ ಚೀನಾದ ಕಂಪೆನಿಗಳು ಸ್ವಂತ ಪ್ರಮಾಣ ಪತ್ರದೊಂದಿಗೆ ದೂರಸಂಪರ್ಕ ಸಚಿವಾಲಯಕ್ಕೆ ಬ್ಯಾಂಕ್ ಗ್ಯಾರಂಟಿ ನೀಡಬೇಕೆನ್ನುವ ಷರತ್ತು ವಿಧಿಸಲಿದೆ ಎನ್ನಲಾಗಿದೆ. ತಪಾಸಣೆಗಾಗಿ ಸರ್ಕಾರ ಉಪಕರಣಗಳ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿದರೂ ಮೊಬೈಲ್ ಕಂಪೆನಿಗಳು ಉಪಕರಣಗಳನ್ನು ಪಡೆಯುವದು ಹೆಚ್ಚಿನ ವಿಳಂಬ ಆಗುವುದಿಲ್ಲ ಎನ್ನಲಾಗಿದೆ.

ಪ್ರಸ್ತುತ ಕೆನಡಾದ ಎಲೆಕ್ಟ್ರಾನಿಕ್ ವಾರ್ ಫೇರ್ ಅಸೋಸಿಯೇಟ್ಸ್, ಅಮೆರಿಕದ ಇನ್ಫೋಗಾರ್ಡ್, ಇಸ್ರೇಲ್ ನ ಆಲ್ ತಲ್ ಸೆಕ್ಯುರಿಟಿ ಕನ್ಸಲ್ಟಿಂಗ್ ಪ್ರಮುಖ ಅಂತಾರಾಷ್ಟ್ರೀಯ ಭದ್ರತಾ ಆಡಿಟ್ ಎಜೆನ್ಸಿಗಳಾಗಿದ್ದು ಆಮದಿಗೆ ಇವುಗಳ ಸರ್ಟಿಫಿಕೇಟ್ ಅವಶ್ಯಕತೆ ಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X