ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಶಸ್ತ್ರಾಸ್ತ್ರ ಮಾರಾಟ ಇಬ್ಬರ ಸೆರೆ

By Mahesh
|
Google Oneindia Kannada News

Illegal Arms Trade in Bellary
ಬಳ್ಳಾರಿ, ಜೂ.2: ಅಕ್ರಮ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ಹೊಂದಿ ಬಳ್ಳಾರಿ ನಗರದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಬಳ್ಳಾರಿ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ಬಂಧಿತರು ಆಂಧ್ರದ ಗಂಗಾವರಂನ ಧರ್ಮೇಂದ್ರ ಹಾಗೂ ಜಾರ್ಖಂಡ್ ರಾಜ್ಯದ ಶಕೀಲ್ ಅನ್ಸಾರಿ. ಬಂಧಿತರಿಂದ ಮೇಡ್ ಇನ್ ಯುಎಸ್‌ಎ ಎಂದು ನಮೂಸಿದ 2 ಕಂಟ್ರಿ ಮೇಡ್ ಪಿಸ್ತೂಲ್, ಎರಡು ಸ್ಪೇರ್ ಮ್ಯಾಗಜಿನ್, 30 ಗುಂಡುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

4 ಲಕ್ಷ ರು.ಮೌಲ್ಯದ ಈ ವಸ್ತುಗಳನ್ನು ಬಂಧಿತರು ಮಾರಾಟ ಮಾಡಲು ಬಳ್ಳಾರಿಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದರು. ಮೋಕಾ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರು ಮಾಹಿತಿ ನೀಡಿದರು.
*****

ಚಾಲಾಕಿ ಲಾರಿ ಕಳ್ಳರು

ಲಾರಿಗಳಿಗೆ ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಸರಕು ಸಾಗಿಸುವ ನೆಪದಲ್ಲಿ ವಿವಿಧ ಕಂಪನಿಗಳಿಗೆ ವಂಚಿಸುತ್ತಿದ್ದ ಆಂಧ್ರದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ 10 ಲಕ್ಷ ರು. ಮೌಲ್ಯದ ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆಂಧ್ರದ ಶ್ರೀನಿವಾಸಪುರಂನ ತಾಡಪತ್ರಿಯ ನರೇಶ (29), ಅನಂತಪುರದ ನಾಗರಾಜ (29) ಮತ್ತು ಕೆ.ಎನ್. ಪಾಳ್ಯಂನ ಜಿ. ಸೂರಿ ( 38) ಅಲಿಯಾಸ್ ಸೂರಪ್ಪ ಬಂಧಿತ ಆರೋಪಿಗಳು.ಆರೋಪಿಗಳಿಂದ ಒಂದು ಲಾರಿ, 4,99,900 ರು. ನಗದು, ನಕಲಿ ನಂಬರ್ ಪ್ಲೇಟ್ಸ್, ಸ್ಟಿಕ್ಕರ್‌ಗಳು, ಲಾರಿಗೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಆರೋಪಿಗಳು ಕಳೆದ ಅಕ್ಟೋಬರ್ 21,2009 ರಂದು ಸ್ಟೀಮ್ ಲೈನ್ ಇಂಡಸ್ಟ್ರೀಸ್ ಟ್ರಾನ್ಸ್ ಪೋರ್ಟ್ ಕಂಪನಿಯ ಮುಖಾಂತರ 9.39 ಲಕ್ಷ ರೂ. ಮೌಲ್ಯದ 23.450 ಮೆಟ್ರಿಕ್ ಟನ್ ತೂಕದ ಸಿ.ಆರ್. ಸ್ಟೀಲ್ ಪ್ಲೇಟ್ ಅನ್ನು ಜೆಎಸ್‌ಡಬ್ಲ್ಯೂನಲ್ಲಿ ಲೋಡ್ ಮಾಡಿಕೊಂಡು ಮಹಾರಾಷ್ಟ್ರದ ಭಾರಮತಿಗೆ ಸಾಗಿಸುತ್ತಿದ್ದರು.

ಆರೋಪಿಗಳು ನಿಗದಿತ ಸ್ಥಳಕ್ಕೆ ಈ ಮಾಲನ್ನು ತಲುಪಿಸದೇ ಮೋಸ ಮಾಡಿದ್ದಾರೆ ಎಂದು ಕಂಪನಿಯ ವ್ಯವಸ್ಥಾಪಕ ಪ್ರಮೋದ್ ಶರ್ಮ ಗಾದಿಗನೂರು ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X