ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನೆಮಾಟೋಗ್ರಫಿ ಕಲಿಯಲು ಆಸಕ್ತಿ ಇದೆಯೆ?

By Prasad
|
Google Oneindia Kannada News

Cinematography and Sound recording course details
ಬೆಂಗಳೂರು, ಜೂ. 1 : ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ವತಿಯಿಂದ ಪ್ರಸಕ್ತ 2010-11ನೇ ಸಾಲಿನ ಡಿಪ್ಲೋಮಾ ಸಿನೆಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ನೀಡಲಾಗುತ್ತಿದೆ.

ಇದುವರೆಗೆ ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿತ್ತು. ನೂತನ ಸರ್ಕಾರಿ ಆದೇಶದ ಪ್ರಕಾರ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಶೇ.50ರಷ್ಟು ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಅರ್ಜಿಗಳನ್ನು ಪ್ರಾಂಶುಪಾಲರ ಕಚೇರಿ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ ಅಂಚೆ, ಬೆಂಗಳೂರು - 560 088 ಅಥವಾ ಸಿಸಿಟೆಕ್-ಜಿಎಫ್‌ಟಿಐ, 1ನೇ ಮಹಡಿ, ಇನ್ಸ್‌ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ, ಮಹಾರಾಣಿ ವಿಜ್ಞಾನ ಕಾಲೇಜು ಮುಂಭಾಗ, ಅರಮನೆ ರಸ್ತೆ, ಬೆಂಗಳೂರು-1 ಇಲ್ಲಿಂದ ಖುದ್ದಾಗಿ ಪಡೆಯಬಹುದು. ಅಥವಾ ಪ್ರಾಂಶುಪಾಲರು, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ಇವರ ಹೆಸರಿನಲ್ಲಿ ರು. 350ಗಳ ಡಿ.ಡಿ.ಯನ್ನು ಕಳುಹಿಸಿ ಪಡೆಯಬಹುದು.

ಅರ್ಜಿಗಳನ್ನು ನೀಡುವ ಹಾಗೂ ಭರ್ತಿಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಜೂನ್ 5 2010. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂ. 080 – 28466768, 9448810161, 9008797965 ಮೂಲಕ ಸಂಪರ್ಕಿಸಬಹುದಾಗಿದೆ ಅಥವಾ ವೆಬ್‌ಸೈಟ್ www.filminstitutebangalore.com ಅನ್ನು ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X