ಮೈತ್ರಿಗೆ ಮೊದಲೇ ಜೆಡಿಎಸ್ ಮುನಿಸು

ರಾಜ್ಯಸಭೆಗೆ ಕಾಂಗ್ರೆಸ್ ಸೂಚಿಸಿರುವ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಲು ಜೆಡಿಎಸ್ ನಿರಾಕರಿಸಿದೆ. ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಒಮ್ಮತ ಮೂಡದ ಕಾರಣ, ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮುರಿದು ಬೀಳುವ ಸಾಧ್ಯತೆಯಿದೆ.
ರಾಜ್ಯಸಭೆಗೆ ಕಾಂಗ್ರೆಸ್ ಮೊದಲ ಅಭ್ಯಥಿಯಾಗಿ ಆಸ್ಕರ್ ಫರ್ನಾಂಡಿಸ್ ಹಾಗೂ ಎರಡನೇ ಅಭ್ಯರ್ಥಿಯಾಗಿ ಬಿಕೆ ಹರಿಪ್ರಸಾದ್ ಅವರನ್ನು ಹೈಕಮಾಂಡ್ ಸೂಚಿಸಿತ್ತು. ಆದರೆ, ಬಿಕೆ ಹರಿಪ್ರಸಾದ್ ಅವರ ಬದಲಿಗೆ ಕುಪ್ಪೇಂದ್ರ ರೆಡ್ಡಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ಹೇಳಿದೆ. ಎರಡನೇ ಅಭ್ಯರ್ಥಿ ಸ್ಥಾನಕ್ಕೆ ಹಿರಿಯ ರಾಜಕಾರಣಿಗಳಾದ ಸಿಎಂ ಇಬ್ರಾಹಿಂ, ತಾರಾದೇವಿ ಕೂಡ ಲಾಬಿ ನಡೆಸಿದ್ದರು ಎನ್ನಲಾಗಿದೆ.
ಜೆಡಿಎಸ್ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಮುಖಂಡರಾದ ಎಂಪಿ ಎಚ್ ವಿಶ್ವನಾಥ್ ಹಾಗೂ ಎಂಎಲ್ ಎ ಶ್ರೀನಿವಾಸ ಪ್ರಸಾದ್ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇತ್ತ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಗೊಂದಲದಲ್ಲಿ ಜೆಡಿಎಸ್ ಮುಳುಗಿದೆ.
ಅಸ್ಕರ್ ಆಘಾ, ಸೂರ್ಯ ನಾರಾಯಣ ರೆಡ್ಡಿ ಹಾಗೂ ಉದ್ಯಮಿ ಸರೋವರ್ ಶ್ರೀನಿವಾಸ್ ಆಕ್ಷಾಂಕಿಗಳಾಗಿದ್ದು, ವೀರಣ್ಣ ಮತ್ತಿಕಟ್ಟಿ ಜೊತೆಗೆ ಯಾರು ಮೇಲ್ಮನೆಗೆ ಹೋಗಲಿದ್ದಾರೆ ಎಂಬುದು ಸದ್ಯದಲ್ಲೇ ನಿರ್ಧಾರವಾಗಲಿದೆ ಎಂದು ದೇವೇಗೌಡರು ಹೇಳಿದ್ದಾರೆ.












Click it and Unblock the Notifications