ಜನರು ಒದೆಯಲು ಮುಂದಾದರೆ ನಾವ್ ರೆಡಿ
ರಾಯಚೂರು,
ಮೇ. 28 : ನಮ್ಮನ್ನು ರಾಜ್ಯದ ಆರು ಕೋಟಿ ಜನ ಆರಿಸಿ ಕಳುಹಿಸಿದ್ದಾರೆ. ಅವರಿಗೆ ನಮ್ಮ ಕಾರ್ಯನಿರ್ವಹಣೆ ಹಿಡಿಸದಿದ್ದರೆ, ಅವರು ನಮ್ಮನ್ನು ಒದೆಯಲಿ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. id="toptextpromo">ನಗರದಲ್ಲಿ
ಆಯೋಜಿಸಲಾಗಿದ್ದ ವಾಜಪೇಯಿ ಆರೋಗ್ಯಶ್ರೀ ಬೃಹತ್ ಆರೋಗ್ಯ ಮೇಳದಲ್ಲಿ ಮಾತನಾಡುತ್ತಿದ್ದ ಅವರು, ಕುಮಾರಸ್ವಾಮಿ ಅವರಿಗೆ ನಮ್ಮನ್ನು ಒದೆಸಬೇಕು ಎಂಬ ಅಪೇಕ್ಷ ಇರಬಹುದು. ಅದನ್ನು ನಿರ್ಧರಿಸುವವರು ರಾಜ್ಯದ ಜನತೆ ಹೊರತು ಅವರಲ್ಲ ಎಂದರು. id='are-slot-1' class='oiad oi-axt oiadv'> id='top-searched-articles'>ರಾಜ್ಯದ
ಜನತೆ ಬಿಜೆಪಿ ಕಾರ್ಯವೈಖರಿ ಹೇಗಿದೆ ಎಂದು ಗೊತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಹಿಡಿಸದಿದ್ದಲ್ಲಿ ಎಲ್ಲ ಸಚಿವರನ್ನು ಒದೆಯಲಿ ಮುಂದಾದರೆ ನಾವೆಲ್ಲರೂ ರೆಡಿಯಾಗಿದ್ದೇವೆ ಎಂದು ರಾಮುಲು ಹೇಳಿದರು.











Click it and Unblock the Notifications