ಜಾತಿ ಜನಗಣತಿ ವಿರುದ್ಧ ಗುಡುಗಿದ ಹುಲಿ
ಮುಂಬೈ,
ಮೇ.28: ಜಾತಿ ಆಧಾರಿತ ಜನಗಣತಿ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೇ ಕೇಂದ್ರ ಸರ್ಕಾರ, ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವಂತೆ ಸಚಿವರ ತಂಡ(GoM) ರಚಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ಶಿವಸೇನೆ ಜಾತಿ ಆಧಾರಿತ ಜನಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. id="toptextpromo">ಜಾತಿ
ಆಧಾರಿತ ಜನಗಣತಿ ಕುರಿತಂತೆ ಗುರುವಾರ ತಮ್ಮ ಅಧಿಕೃತ ನಿವಾಸ ಮಾತೋಶ್ರೀಯಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾಠಾಕ್ರೆ ಸುದ್ದಿಗಾರರ ಜತೆ ಮಾತನಾಡುತ್ತಾ, ಜಾತಿ ಆಧಾರಿತ ಜನಗಣತಿಯಿಂದಾಗಿ ದೇಶದ ಹಿತಾಸಕ್ತಿಗೆ ಕೆಡುಕುಂಟಾಗಲಿದೆ ಎಂದು ಅಭಿಪ್ರಾಯಪಟ್ಟರು. ಕ್ರಿಕೆಟ್ ಪ್ರೇಮಿಯೂ ಆಗಿರುವ ಬಾಳಾಠಾಕ್ರೆ, ಟಿ-20 ವಿಶ್ವಕಪ್‌ನಲ್ಲಿ ಸೋಲುಂಡು ಬಂದಿರುವ ಭಾರತ ಕ್ರಿಕೆಟ್ ತಂಡಕ್ಕೆ ಛೀಮಾರಿ ಹಾಕಿ, ದೇಶಪ್ರೇಮವಿಲ್ಲದ ಸ್ವಾರ್ಥ ಆಟಗಾರರು ಎಂದರು. id='are-slot-1' class='oiad oi-axt oiadv'> id='top-searched-articles'>ಜಾತಿ
ಆಧಾರಿತ ಜನಗಣತಿ ಪರ ದನಿ ಎತ್ತಿರುವ ಬಿಜೆಪಿಯ ಹಿಂದುಳಿದ ನಾಯಕ ಗೋಪಿನಾಥ್ ಮುಂಡೆ, ಠಾಕ್ರೆ ಅವರದ್ದು ವೈಯಕ್ತಿಕ ಅಭಿಪ್ರಾಯ, ಇದರಿಂದ ಬಿಜೆಪಿ ಶಿವಸೇನಾ ಸಂಬಂಧಕ್ಕೆ ಹಾನಿಯಾಗಲ್ಲ. ಜಾತಿ ಆಧಾರಿತ ಗಣತಿ ಹಿಂದುಳಿದ ವರ್ಗಕ್ಕೆ ಪೂರಕವಾಗಿದೆ ಎಂದಿದ್ದಾರೆ. ಜಾತಿ ಆಧಾರಿತ ಜನಗಣತಿ ವಿರೋಧಿಸುತ್ತಿರುವ ಆರೆಸ್ಸೆಸ್ ಗೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ.











Click it and Unblock the Notifications