ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ರಕ್ಷಣಾ ಬಜೆಟ್ ನಲ್ಲಿ ಶೇ.31 ಏರಿಕೆ

By Mahesh
|
Google Oneindia Kannada News

Pak Defence Budget Raised
ಇಸ್ಲಾಮಾಬಾದ್, ಮೇ.27: ಪಾಕಿಸ್ತಾನ ತನ್ನ ರಕ್ಷಣಾ ಬಜೆಟ್ ನ್ನು ಶೇ.31 ರಷ್ಟು ಹೆಚ್ಚಿಸಿದೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. 2010-11 ರ ಬಜೆಟ್ ನಲ್ಲಿ ರಕ್ಷಣಾ ವೆಚ್ಚವನ್ನು 34,300 ಕೋಟಿ ರೂಪಾಯಿಗಳಿಂದ 44,800 ರುಪಾಯಿಗಳಿಗೇರಿಸಲಾಗಿದೆ.

ರಾಷ್ಟ್ರೀಯ ಅಸೆಂಬ್ಲಿಯ ಹಣಕಾಸು ಮತ್ತು ಆದಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಫೌಜಿಯಾ ವಹಾಬ್ ಅವರು ರಕ್ಷಣಾ ಇಲಾಖೆ ರಕ್ಷಣಾ ಬಜೆಟ್ ನ್ನು 11,000 ಕೋಟಿ ರೂಪಾಯಿಗಳಷ್ಟು ಏರಿಸುವಂತೆ ಕೋರಿತ್ತು. ಸರ್ಕಾರ ಇದರಲ್ಲಿ 10,500 ಕೋಟಿ ರೂಪಾಯಿಗಳನ್ನು ಏರಿಸಲು ಅನುಮೋದನೆ ನೀಡಿದೆ. ಕಳೆದ ಸಾಲಿನಲ್ಲಿ ಸರ್ಕಾರ ರಕ್ಷಣಾ ಇಲಾಖೆಗೆ 34,300 ಕೋಟಿ ರೂಪಾಯಿಗಳ ಅನುದಾನ ನೀಡಿತ್ತು.

ಆದರೆ ಮಿಲಿಟರಿ ವೆಚ್ಚ ಅಧಿಕವಾದ ಕಾರಣದಿಂದ 6000 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿತ್ತು. ಹೆಚ್ಚಿದ ವೆಚ್ಚದಿಂದ 2009-10ರ ರಕ್ಷಣಾ ಇಲಾಖೆಯ ವೆಚ್ಚ 40,300 ಕೋಟಿ ರೂಪಾಯಿಗಳಿಗೇರಿತ್ತು. 2010-11 ರ ಪಾಕಿಸ್ತಾನ ಸರ್ಕಾರದ ಒಟ್ಟು ಬಜೆಟ್ 2.488 ಕೋಟಿ ರೂಪಾಯಿಗಳಾಗಿದ್ದು ಇದರಲ್ಲಿ 1.7 ಲಕ್ಷ ಕೋಟಿ ರೂಪಾಯಿ ಕೇಂದ್ರ ಸರ್ಕಾರದ ತೆರಿಗೆಗಳಿಂದ ಬರುತ್ತಿದೆ.

ಇದರಲ್ಲಿ 32,700 ಕೋಟಿ ರೂಪಾಯಿಗಳು ವಿದೇಶೀ ನೆರವು ಹಾಗೂ ಸಾಲದಿಂದ ಬರುತಿದ್ದು ಉಳಿದ ಹಣವನ್ನು ತೆರಿಗೆಯೇತರ ಆದಾಯದಿಂದ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸಲಾದ ಹಣದಲ್ಲಿ ಕೇಂದ್ರ ಸರ್ಕಾರ 1.036 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತಿದ್ದು ಉಳಿದ 1.412 ಲಕ್ಷ ಕೋಟಿ ರೂಪಾಯಿಗಳನ್ನು ರಕ್ಷಣಾ ಹಾಗೂ ಇತರ ವೆಚ್ಚ ಹಾಗೂ ಸರ್ಕಾರ ನಡೆಸಲು ಬಳಸಿಕೊಳ್ಳುತ್ತಿದೆ.

ಸರ್ಕಾರ ಮುಂದಿನ ಹಣಕಾಸು ವರ್ಷದಿಂದ ವ್ಯಾಟ್ ತೆರಿಗೆಯನ್ನು ಶೇ.15 ಕ್ಕೆ ಏರಿಸಲು ಉದ್ದೇಶೀಸಿದ್ದು ಇದರಿಂದ ಆದಾಯ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಈ ಹಣಕಾಸು ವರ್ಷದಲ್ಲಿ ಸರ್ಕಾರದ ಒಟ್ಟು ವೆಚ್ಚ 2.92 ಲಕ್ಷ ಕೋಟಿ ರೂಪಾಯಿಗಳಾಗಿದ್ದು ಆದಾಯ 2.16 ಲಕ್ಷ ಕೋಟಿ ರುಪಾಯಿಗಳಾಗಿವೆ ಸರ್ಕಾರ 76,300 ಕೋಟಿ ರೂಪಾಯಿಗಳ ವಿತ್ತೀಯ ಕೊರತೆಯನ್ನು ಎದುರಿಸುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X