ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಧಾನವಿಷಕ್ಕೆ ಇನ್ನೊಂದು ಹೆಸರು ಆಟೋರಿಕ್ಷಾ

By Shami
|
Google Oneindia Kannada News

ಬೆಂಗಳೂರು, ಮೇ 27: ಬೆಂಗಳೂರು ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳಲ್ಲಿ ಅನೇಕ ಚಾಲಕರು ಸೈಲೆನ್ಸರ್ ಟ್ಯಾಂಪರ್ ಮಾಡಿ/ ಮಫ್ಲರ್‌ಗಳನ್ನು ತೆಗೆದು ಗಾಡಿ ಓಡಿಸುತ್ತಿರುವುದರಿಂದ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯ ಕ್ಷಣಕ್ಷಣಕ್ಕೂ ಉಲ್ಭಣಿಸುತ್ತಿದೆ. ಭಾರತದಲ್ಲೆ ಅತ್ಯುತ್ತಮ ನಗರವೆಂದು ಖ್ಯಾತಿವೆತ್ತ ಬೆಂಗಳೂರು ಜೀವಿಗಳ ಮೇಲೆ ಎಗ್ಗಿಲ್ಲದೆ ನಡೆಯುತ್ತಿರುವ ಈ ದೌರ್ಜನ್ಯದಿಂದ ಬೇಸತ್ತುಹೋದ ನಾಗರೀಕರಿಂದ ಹರಿದುಬರುತ್ತಿರುವ ದೂರುಗಳು ಬಳಸದೆ ಉಳಿದ ತ್ಯಾಜ್ಯವಸ್ತುಗಳಾಗಿವೆ!

ಹಾಗಂತ ದಟ್ಸ್ ಕನ್ನಡ ಷರಾ ಬರೆದರೆ ತಪ್ಪಾಗುತ್ತದೆ. ದೂರವಾಣಿ ಮತ್ತು ಇ-ಮೇಲ್ ಮೂಲಕ ಸಾರಿಗೆ ಇಲಾಖೆಯ ಕಟ್ಟಡದತ್ತ ಹರಿದುಬಂದಿರುವ ಅಪಾರ ಸಂಖ್ಯೆಯ ದೂರುಗಳು ಇದೀಗ ಸಾರಿಗೆ ಇಲಾಖೆಯ ಗಮನಕ್ಕೆ ಬಂದಂತೆ ಕಾಣಿಸುತ್ತಿದೆ. ಹೌದು, ಸಾರಿಗೆ ಇಲಾಖೆ ಕಾರ್ಯೋನ್ಮುಖವಾಗಿದ್ದು ಈ ನಿಟ್ಟಿನಲ್ಲಿ ಹಲಕೆಲವು ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ.

ಸಾರಿಗೆ ಇಲಾಖೆ ನಿನ್ನೆ ಬುಧವಾರ ಹೊರಡಿಸಿರುವ ಒಂದು ಪ್ರಕಟಣೆ ಹೀಗೆ ಸಾರುತ್ತಿದೆ:
ಈ ಸಂಬಂಧ ದಿನಾಂಕ 21-4-2010 ರಂದು ಆಟೋರಿಕ್ಷಾ ಸಂಘಗಳ ಅಧ್ಯಕ್ಷರುಗಳಿಗೆ ಪತ್ರ ಬರೆದು ಇಂತಹ ದೂರುಗಳ ಸಂಬಂಧ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಇಲಾಖೆಯು ವಿಶೇಷ ತನಿಖಾ ತಂಡಗಳನ್ನು ರಚಿಸಿ ಕ್ರಮ ಜರುಗಿಸುವ ಉದ್ದೇಶ ಹೊಂದಿರುವುದರಿಂದ, ಸಂಘಗಳ ಸದಸ್ಯರುಗಳ ಸಭೆಗಳನ್ನು ಆಯೋಜಿಸಿ ಈ ದಿಸೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡುವಂತೆಯೂ ಹಾಗೂ ಆಟೋರಿಕ್ಷಾ ಕ್ಯಾಬ್‌ಗಳನ್ನು ಬಳಸುವ ಎಲ್ಲಾ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ತಿಳುವಳಿಕೆ ನೀಡುವಂತೆಯೂ ತಿಳುವಳಿಕೆ ನೀಡಲಾಗಿದೆ.

ಈ ರೀತಿ ಸೂಚನೆ ನೀಡಿದಾಗ್ಯೂ, ಇಂತಹ ದೂರುಗಳು ಇಲಾಖೆಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಈ ದಿಸೆಯಲ್ಲಿ ಇಲಾಖೆಯ ವತಿಯಿಂದ ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಿ ತಪ್ಪಿತಸ್ಥರ ವಿರುದ್ದ ನಿಯಮಾನುಸಾರ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿರುತ್ತದೆ. ಆದ್ದರಿಂದ, ಆಟೋರಿಕ್ಷಾ ಚಾಲಕರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ಚಾಲನೆ ಮಾಡಲು ಈ ಮೂಲಕ ಪ್ರಕಟಣೆ ನೀಡಲಾಗಿದೆ. ತಪ್ಪಿದ್ದಲ್ಲಿ, ಮೇಲ್ಕಂಡಂತೆ ಸೈಲೆನ್ಸರ್ ವಿರೂಪಗೊಳಿಸಿ ಪರಿಸರ ಮಾಲಿನ್ಯ ಉಂಟುಮಾಡುವ ಆಟೋರಿಕಾಗಳನ್ನು ವಶಪಡಿಸಿಕೊಂಡು ರಹದಾರಿಗಳನ್ನು ಅಮಾನತ್ತುಪಡಿಸುವ ಕ್ರಮ ವಹಿಸಲಾಗುವುದು. ಈ ವಿಷಯವನ್ನು ಸಂಬಂಧಪಟ್ಟ ಆಟೋರಿಕ್ಷಾ ಸಂಘದ ಯೂನಿಯನ್‌ಗಳು ಸಭೆ ನಡೆಸಿ ಸಂಘದ ಸದಸ್ಯರುಗಳು ಸೇರಿದಂತೆ ಆಟೋರಿಕ್ಷಾ ಚಾಲಕರು/ ಮಾಲೀಕರ ಗಮನಕ್ಕೆ ತರಲು ಸಾರಿಗೆ ಆಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X