ಹಾಲಪ್ಪಗೆ ಡಿಎನ್ಎ ಪರೀಕ್ಷೆ ಏಕೆ ? ಕೋರ್ಟ್
ಬೆಂಗಳೂರು,
ಮೇ. 26 : ಆತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಡಿಎನ್ಎ ಪರೀಕ್ಷೆ ಮಾಡುವ ಅಗತ್ಯವಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಶಿವಮೂಗ್ಗ ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಿರುವುದನ್ನು ಹಾಲಪ್ಪ ಪರ ವಕೀಲರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. id="toptextpromo">ಅರ್ಜಿಗೆ
ಸಂಬಂಧಿಸಿದಂತೆ ನ್ಯಾಯಮೂರ್ತಿ ಸಿ ಆರ್ ಕುಮಾರಸ್ವಾಮಿ ಅವರು ಈ ಪ್ರಶ್ನೆಯನ್ನು ಸರಕಾರದ ವಕೀಲರಿಗೆ ಕೇಳಿದರು. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣ ನಡೆದು ಆರು ತಿಂಗಳಾಗಿರುವಾಗ, ಈಗ ಅವರ ರಕ್ತ ಪರೀಕ್ಷೆಯ ಅಗತ್ಯ ಏನಿದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಥವಾಗಿ ಉತ್ತರಿಸುವಲ್ಲಿ ಸರಕಾರಿ ವಕೀಲರು ವಿಫಲರಾಗಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಇಂದು(ಮೇ 26) ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಇಂದು
ನಡೆಯುವ ವಿಚಾರಣೆ ವೇಳೆಯಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುವಂತೆ ಅವರು ಸರಕಾರಿ ವಕೀಲರಿಗೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣ ವೇಳೆ ಎಲ್ಲ ದಾಖಲೆಗಳನ್ನೂ ಹಾಜರುಪಡಿಸುವಂತೆ ಅವರು ನಿರ್ದೇಶಿಸಿದ್ದಾರೆ. ಹಾಲಪ್ಪ ಪರ ವಕೀಲ ರವಿ ಬಿ ನಾಯಕ್ ಅವರು, ಬಟ್ಟೆ ಮೇಲಿರುವ ರಕ್ತದ ಕಲೆ ಯಾರದ್ದು ಎಂಬುದು ಮೊದಲು ಪತ್ತೆಯಾಗಬೇಕು. ಅದನ್ನು ಪತ್ತೆ ಮಾಡುವ ಬದಲು ಡಿಎನ್ಎ ಪರೀಕ್ಷೆ ಮಾಡುವುದು ಸರಿಯಲ್ಲ. ಇಂತಹ ಪರೀಕ್ಷೆಯನ್ನು ಒತ್ತಾಯ ಪೂರ್ವಕವಾಗಿ ನಡೆಸುವಂತಿಲ್ಲ ಎಂದು ಸುಪ್ರಿಂಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಮಾನ್ಯ ಮಾಡಬೇಕು ಎಂದು ಅವರು ಕೋರಿದರು.











Click it and Unblock the Notifications