ಮದರ್ ಥೇರಸಾ ಕ್ರಿಶ್ಚಿಯನ್ ಲಾಬಿಕೋರೆ?
ಬೆಂಗಳೂರು,
ಮೇ. 24 : ಮದರ್ ಥೇರಸಾ ಎಂದ ತಕ್ಷಣ ನೆನಪಿಗೆ ಬರುವುದು ಅನಾಥರು, ಭಿಕ್ಷುಕರ, ದೀನದಲಿತರ ಪಾಲಿಗೆ ದೈವ ಎಂದೇ ಕರೆಸಿಕೊಂಡವರು. ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಮೂಲಕ ಇಡೀ ಜೀವನವನ್ನೇ ಸಾಮಾಜಕ್ಕಾಗಿ ಮುಡುಪಾಗಿಟ್ಟ ಗ್ರೇಟ್ ಹೆಣ್ಣುಮಗಳಾಕೆ ಅಲ್ವೇ. ಆದರೆ, ಮದರ್ ಥೇರಸಾ ಅವರ ಸಮಾಜ ಸೇವೆ ಮಾಡುವ ಮೂಲಕ ಕ್ರಿಶ್ಚಿಯನ್ ಲಾಬಿ ನಡೆಸಿದರು ಎಂದು ಶ್ರೀ ರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. id="toptextpromo">ನಗರದಲ್ಲಿ
ಸಹೇಲಿ ಸಂಘಟನೆ ಏರ್ಪಡಿಸಿದ್ದ ಎಚ್ಎಸ್ಆರ್ ಲೇಔಟ್ ಶಾಖೆ ಉದ್ಘಾಟನೆ ಸಮಯದಲ್ಲಿ ಈ ಪ್ರಸಂಗ ಜರುಗಿದೆ. ಸಹೇಲಿ ಸಂಘಟನೆ ಮುಖ್ಯಸ್ಥರನ್ನು ಅತಿಥಿಗಳೊಬ್ಬರು ಮದರ್ ಥೇರಸಾಗೆ ಹೋಲಿಸಿದಾಗ ಮಧ್ಯೆ ಪ್ರವೇಶಿಸಿದ ಮುತಾಲಿಕ್, ಮದರ್ ಥೇರಸಾ ಒಬ್ಬ ಸ್ವಾರ್ಥಿ ಅಲ್ಲದೇ ಕ್ರಿಶ್ಚಿಯನ್ನರಿಗಾಗಿ ಲಾಬಿ ನಡೆಸಿದವರು. ಇಂತವರನ್ನು ಅಂತವರಿಗೆ ಹೋಲಿಸುವುದು ಸರಿಯಲ್ಲ ಎಂದು ಸಲಹೆ ಮಾಡಿದರು. id='are-slot-1' class='oiad oi-axt oiadv'> id='top-searched-articles'>ಇದಕ್ಕೂ
ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್, ತಮ್ಮನ್ನು ಲಂಚದ ಆರೋಪದಲ್ಲಿ ಸಿಲುಕಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವದಾಗಿ ಸ್ಪಷ್ಟಪಡಿಸಿದರು. ಮೇ.26 ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸವಿವರವಾಗಿ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದರು. ತೆಹಲ್ಕಾ ಮತ್ತು ಹೆಡ್ ಲೈನ್ಸ್ ಟುಡೇ ಮಾಡಿರುವ ಆರೋಪವನ್ನು ಸುಳ್ಳೆಂದು ಸಾಬೀತುಪಡಿಸುವೆ ಎಂದು ಹೇಳಿದರು. ಈ ಸಂಸ್ಥೆಗಲ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ದಾಖಲಿಸಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಪ್ರಕರಣ ದಾಖಲಿಸುವುದಾಗಿ ಮುತಾಲಿಕ್ ಹೇಳಿದರು.











Click it and Unblock the Notifications