ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ : ನರೇಂದ್ರ ಮೋದಿ ಶ್ರೇಷ್ಠ ಸಿಎಂ!

By Mrutyunjaya Kalmat
|
Google Oneindia Kannada News

Narendra Modi
ನವದೆಹಲಿ, ಮೇ. 20 : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎಂದ ತಕ್ಷಣ ನಿಮಗೆ ನೆನಪಿಗೆ ಬರುವುದು ಏನೇನು ? ಅಯ್ಯೋ ಅವರೊಬ್ಬ ರಕ್ತದಾಹಿ, ಗೋಧ್ರಾ ಹತ್ಯಾಕಾಂಡ ನಡೆಸಿ ಅನೇಕರನ್ನು ಬಲಿ ತೆಗೆದುಕೊಂಡ ಕೊಲೆಗಾರ. ಉಗ್ರ ಕೋಮುವಾದಿ, ಅಖಂಡ ಹಿಂದೂತ್ವವಾದಿ, ಮುಸ್ಲಿಂ ವಿರೋಧಿ, ಅನೆ ನಡೆದದ್ದು ದಾರಿ, ತಾನು ಮಾಡಿದ್ದೇ ಸರಿ ಎಂಬಂತ ವ್ಯಕ್ತಿತ್ವವುಳ್ಳ ಸರ್ವಾಧಿಕಾರಿ, ಗುಜರಾತ್ ಹಾಗೂ ದೇಶ ಕಂಡ ಶ್ರೇಷ್ಠ ಮುಖ್ಯಮಂತ್ರಿ. ಹೀಗೆ ಅನೇಕ ವಿಶೇಷಣಗಳನ್ನು ಹೊಂದಿರುವ ವ್ಯಕ್ತಿ ಅಲ್ಲವೇ.

ಒಂದು ವಿಶೇಷವೆಂದರೆ ಇಂತಹ ಅನೇಕ ಬಿರುದು ಬಾವಳಿಗಳನ್ನು ಹೊಂದಿರುವ ನರೇಂದ್ರ ಮೋದಿ ಬಲಪಂಥೀಯ ಮುಖ್ಯಮಂತ್ರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದೇ ಕಾರಣಕ್ಕೆ ಅವರನ್ನು ಕೆಲ ಎಡಪಂಥೀಯ ಅನ್ನುವುದಕ್ಕಿಂತ ಜಾತ್ಯಾತೀತ ಎಂದು ಕರೆಸಿಕೊಳ್ಳುವ ಮಾಧ್ಯಮಗಳು ಅವರನ್ನು ಅವಶ್ಯಕತೆ ಬಿದ್ದಾಗ ಅವರ ಮೇಲೆ ಸವಾರಿ ನಡೆಸಿವೆ. ಕೆಲ ದಿನಗಳ ಹಿಂದೆ ಗೋಧ್ರಾ ಹತ್ಯಾಕಾಂಡದ ಎಸ್ಐಟಿ ವಿಚಾರಣೆಯೇ ಸಾಕ್ಷಿ.

ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿ ಭಾಗಿಯಾಗಿದ್ದಾರೆ ಎಂದು ಸಂಸದ ದಿವಂಗತ ಎಹಸಾನ್ ಜಾಫ್ರಿ ಅವರ ಪತ್ನಿ ಜಾಕೀಯಾ ಜಾಫ್ರಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ರಚಿಸಿರುವ ಎಸ್ಐಟಿ(Special Investigation Team) ವಿಚಾರಣೆ ಸಮಯದಲ್ಲಿ ಮೋದಿ ಅವರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಲಾಗಿತ್ತು. ಇದರಲ್ಲಿ ಎನ್ ಡಿಟಿವಿ, ಸಮಾಜ ಸುಧಾರಕಿ ತೀಸ್ತಾ ಸೆಟಲ್ವಾಡ್ ಅವರ ಪ್ರಮುಖ ಪಾತ್ರ ಪ್ರಮುಖವಾಗಿತ್ತು.

ಆದರೆ ಕೇಳಿ, ಇದೀಗ ಅದೇ ಎನ್ ಡಿಟಿವಿ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಉತ್ತಮ ಮುಖ್ಯಮಂತ್ರಿ ಎಂದು ಆಯ್ಕೆಯಾಗಿದ್ದಾರೆ. ಸುಮಾರು 34 ಸಾವಿರ ಮಂದಿಯೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಅವರಿಗೆ ದೊರಕಿದ ಮತಗಳು ಸಂಖ್ಯೆ ಶೇ.85ರಷ್ಟಂತೆ ಇದನ್ನು ಸ್ವತಃ ಎನ್ ಡಿಟಿವಿಯೇ ಬಹಿರಂಗಪಡಿಸಿದೆ ಎಂದು ಮೋದಿ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಬಲಪಂಥೀಯ ಸಿಎಂ ಇರಬಹುದು. ಆದರೆ, ಅಭಿವೃದ್ಧಿ ಹರಿಕಾರ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಬೆಸ್ಟ್ ಆಫ್ ಲಕ್ ಮೋದಿಜೀ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X