ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ತೃತೀಯ : ಚಿನ್ನದ ವ್ಯಾಪಾರ ಡಲ್ಲೊ ಡಲ್ಲು!

By Mrutyunjaya Kalmat
|
Google Oneindia Kannada News

Gold bangles
ಬೆಂಗಳೂರು, ಮೇ. 17 : ಅಕ್ಷಯ ತೃತೀಯ ದಿನದಂದು ಚಿನ್ನ ಕೊಂಡರೆ ಬಾಳು ಬಂಗಾರವಾಗುತ್ತಂತೆ. ಹೀಗಾಗಿ ಆ ದಿನದಂದು ಸಾಲ ಸೋಲ ಮಾಡಿಯಾದರೂ ಸರಿ ಒಂದು ಗುಂಜಿ ಚಿನ್ನವನ್ನಾದರೂ ಕೊಳ್ಳಬೇಕು ಎಂಬ ಜನರ ಮನಸ್ಥಿತಿಯ ಮಧ್ಯೆ ಈ ವರ್ಷದ ಅಕ್ಷಯ ತೃತೀಯ ಹಬ್ಬದ ವಹಿವಾಟು ಡಲ್ಲೂ ಡಲ್ಲು. ಕಳೆದ 15 ದಿನಗಳಿಂದ ತರಹೇವಾರಿ ಜಾಹೀರಾತು ನೀಡುವ ಮೂಲಕ ಗ್ರಾಹಕರಿಗೆ ಆಕರ್ಷಣೆ ಮಾಡುವಲ್ಲಿ ಚಿನ್ನದಂಗಡಿ ಮಾಲೀಕರು ನಡೆಸಿದ ಕಸರತ್ತು ವಿಫಲವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಅಕ್ಷಯ ತೃತೀಯ ಹಬ್ಬಕ್ಕೆ ಚಿನ್ನದ ಮಾರಾಟದಲ್ಲಿ ಕೊಂಚ ಕಡಿಮೆಯಾಗಿದೆ. ದಕ್ಷಿಣ ಭಾರತದ ವಿಶೇಷ ಹಬ್ಬವಾದ ಅಕ್ಷಯ ತೃತೀಯ ಹಬ್ಬಕ್ಕೆ ಜನರು ಚಿನ್ನ ಖರೀದಿಗೆ ಬರುತ್ತಾರೆ. ಈ ದಿನವನ್ನು ಅತಿ ಚಿನ್ನ ಮಾರಾಟ ಮಾಡುವ ದಿನ ಎಂದು ಎಣಿಸಲಾಗಿದೆ. ಆದರೆ, ಈ ವರ್ಷ ಮಾತ್ರ ಚಿನ್ನ ಮಾರಾಟ ಕಡಿಮೆಯಾಗಿದೆ. ಜನರು ಅಷ್ಟಾಗಿ ಚಿನ್ನದ ಅಂಗಡಿಗಳಿಗೆ ಬಂದಿಲ್ಲ. ಬಂದವರೂ ಕೂಡಾ ನೇಮಕ್ಕೆ ಅಂತ ಸ್ವಲ್ಪ ಪ್ರಮಾಣದ ಚಿನ್ನ ಖರೀದಿ ಮಾಡಿರುವುದರಿಂದ ಚಿನ್ನ ವಹಿವಾಟು ಕಡಿಮೆಯಾಗಲು ಕಾರಣವಾಗಿದೆ.

ಪ್ರತಿವರ್ಷ ಕನಿಷ್ಟ ಎಂದರೂ 10 ಗ್ರಾಂ ಚಿನ್ನ ಖರೀದಿ ಮಾಡುವ ಜನರು, ಈ ವರ್ಷ 2 ಗ್ರಾಂಗೆ ತೃಪ್ತಿಕೊಂಡಿದ್ದಾರೆ. ಇದರ ಜೊತೆಗೆ ಚಿನ್ನದ ಬೆಲೆ ಇತ್ತೀಚೆಗೆ ಏರಿಕೆಯಾಗಿದ್ದು, ಮಾರಾಟದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ, ಅಕ್ಷಯ ತೃತೀಯಕ್ಕೆ ಅನೇಕ ಜಾಹೀರಾತುಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸಲು ನಡೆಸಿದ ಕಸರತ್ತು ಸಂಪೂರ್ಣ ವಿಫಲವಾಗಿದೆ. ಒಟ್ಟಿನಲ್ಲಿ ಭಾರಿ ನಿರೀಕ್ಷೆ ಹೊಂದಿದ್ದ ಚಿನ್ನದ ಅಂಗಡಿ ಮಾಲೀಕರಿಗೆ ನಿರಾಶೆಯಂತೂ ಆಗಿದೆ ಎಂದು ಚಿನ್ನದ ಅಂಗಡಿ ಮಾಲೀಕರ ಅಭಿಪ್ರಾಯವಾಗಿದೆ. ಸದ್ಯ 10 ಗ್ರಾಂ ಚಿನ್ನಕ್ಕೆ 18,450 ರುಪಾಯಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X