ಎಂಸಿಐ ತಜ್ಞರ ಸಮಿತಿಯಲ್ಲಿ ಡಾ ದೇವಿಶೆಟ್ಟಿ
ನವದೆಹಲಿ,
ಮೇ. 16 : ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಾರತೀಯ ವೈದ್ಯಕೀಯ ಮಂಡಳಿಯನ್ನು(ಎಂಸಿಐ) ಕೇಂದ್ರ ಸರಕಾರ ಶನಿವಾರ ವಿಸರ್ಜಿಸಿದೆ. ಅದರ ಜಾಗದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ಡಾ ದೇವಿ ಶೆಟ್ಟಿ ಸೇರಿದಂತೆ 6 ಮಂದಿ ತಜ್ಞ ವೈದ್ಯರ ಸಮಿತಿಯನ್ನು ರಚಿಸಲಾಗಿದೆ. id="toptextpromo">ಎಂಸಿಐ
ಅಧ್ಯಕ್ಷರಾಗಿದ್ದ ಡಾ ಕೇತನ್ ದೇಸಾಯಿ ಇತ್ತೀಚೆಗೆ ಲಂಚ ಪ್ರಕರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 76 ವರ್ಷಗಳ ಹಿಂದೆ ರಚಿಸಲಾಗಿದ್ದ ಮಂಡಳಿಯ ವಿಸರ್ಜನೆಯ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಹಿ ಹಾಕಿದರು. ಈ ಸಂಬಂಧ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಡಾ ಎಸ್ಕೆ ಶರೀನ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯಲ್ಲಿ ಡಾ ರಂಜಿತ್ ರಾಯ್ ಚೌಧರಿ, ಸೀತಾ ನಾಯಕ್, ಗೌತಮ್ ಸೇನ್, ಡಾ ದೇವಿ ಶೆಟ್ಟಿ ಹಾಗೂ ಆರ್ ಎಲ್ ಸಾಲ್ಡಾನಾ ಇದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ವೈದ್ಯರ ಸಮಿತಿ ಮುಂದಿನ ಒಂದು ವರ್ಷದವರೆಗೆ ಕಾರ್ಯನಿರ್ವಹಿಸಲಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಸುಜಾತಾ ರಾವ್ ತಿಳಿಸಿದ್ದಾರೆ. ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸಲು ಮೇಲುಸ್ತುವಾರಿ ಮಂಡಳಿಯ ರಚನೆಗೆ ಹೊಸ ಕಾನೂನು ತರಲಾಗುವುದು ಎಂದು ಸರಕಾರ ತಿಳಿಸಿದೆ.











Click it and Unblock the Notifications