ನಾನು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ : ಮುತಾಲಿಕ್
ಬೆಳಗಾವಿ,
ಮೇ. 14 : ನನ್ನ ಮೇಲೆ ದುಡ್ಡಿಗಾಗಿ ಗಲಭೆ ಎಬ್ಬಿಸುವ ಆರೋಪ ಮಾಡಿರುವುದು ಶುದ್ಧ ಸುಳ್ಳು. ಇದು ಸತ್ಯಕ್ಕೆ ದೂರವಾದ ಸಂಗತಿ. ಹಿಂದೂ ಸಂಘಟನೆಗಳನ್ನು ಬಗ್ಗು ಬಡಿಯಲು ನಡೆಸಿರುವ ವ್ಯವಸ್ಥಿತ ಸಂಚು. ಇದೊಂದು ಭಯಾನಕ ಮೀಡಿಯಾ ಲಾಬಿ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. id="toptextpromo">ಪ್ರಕರಣ
ಬೆಳಕಿಗೆ ಬರುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ಹಿಂದೂಯೇತರ ಸಂಘಟನೆಗಳು ಹಿಂದು ಸಂಘಟನೆಗಳನ್ನು ಹಣಿಯಲು ಸಂಚು ರೂಪಿಸಿವೆ. ರೊಕ್ಕಗಾಗಿ ಶ್ರೀರಾಮಸೇನೆ ಎಂದೂ ಇಂತಹ ನೀಚ ಕೆಲಸಕ್ಕೆ ಇಳಿದಿಲ್ಲ. ನಾನು ನಿರಪರಾಧಿ. ತೆಹಲ್ಕಾ, ಆಜ್ ತಕ್, ಹೆಡ್ ಲೈನ್ಸ್ ಟುಡೇ ಪತ್ರಿಕೆಗಳ ಮೇಲೆ ದೂರು ಸಲ್ಲಿಸುವೆ ಎಂದು ಅವರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೇಶಕ್ಕಾಗಿ,
ಹಿಂದೂತ್ವಕ್ಕಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದೇನೆ. ನನ್ನ ಹಾಗೂ ಶ್ರೀರಾಮಸೇನೆಯ ಹೆಸರು ಕೆಡಿಸಲು ಸಂಚು ರೂಪಿಸಲಾಗಿದೆ. ನಾನು ತಪ್ಪು ಮಾಡಿದ್ದರೆ ಬಹಿರಂಗವಾಗಿ ಗಲ್ಲಿಗೇರಿಸಲಿ. ನಾನು ಯಾರ ಬಳಿಯೂ ಹಣ ಪಡೆದಿಲ್ಲ ಎಂದು ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಮುತಾಲಿಕ್ ಪತ್ರಿಕೆ ಮತ್ತು ವಾಹಿನಿ ವಿರುದ್ಧ ದೂರು ದಾಖಲಿಸಿದ್ದಾರೆ.











Click it and Unblock the Notifications