ಹಿಂದೂ ದೇಗುಲಗಳ ಅಭಿವೃದ್ಧಿಗೆ ಬದ್ಧ: ಹಸೀನಾ
ಢಾಕಾ,
ಮೇ.14: ದೇಶದಲ್ಲಿರುವ ಹಿಂದೂ ದೇಗುಲಗಳ ರಕ್ಷಣೆ, ಅಭಿವೃದ್ಧಿಯ ಹೊಣೆ ಸರ್ಕಾರದ ಮೇಲಿದೆ. ಇದರಲ್ಲಿ ಯಾವುದೇ ರೀತಿಯ ರಾಜಿ ಪ್ರಶ್ನೆಯಿಲ್ಲ. ಮತೀಯ ಅಲ್ಪಸಂಖ್ಯಾತರ ಸುರಕ್ಷತೆ ನಮ್ಮ ಹೊಣೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಹಿಂದೂ ಅಲ್ಪಸಂಖ್ಯಾತರ ಆಸ್ತಿ ಕುರಿತು ಉಂಟಾಗಿದ್ದ ಗೊಂದಲದ ಬಗ್ಗೆ ಹಸೀನಾ ಪ್ರತಿಕ್ರಿಯಿಸಿದರು. id="toptextpromo">ದಿನಜ್
ಪುರ್ ನಲ್ಲಿರುವ ಕಾಂತಜಿರ್ ಮಂದಿರ, ಪುರಾತನ ಢಾಕೇಶ್ವರಿ ದೇಗುಲ ಹಾಗೂ ರಾಮ್ನಾ ಕಾಳಿ ಮಂದಿರಗಳ ಪುನರುಜ್ಜೀವನ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು.ದೇಶದಲ್ಲಿರುವ ಎಲ್ಲಾ ಗುಡಿ, ದೇಗುಲಗಳ ಪಟ್ಟಿ ತಯಾರಿಸಿ ಕಳಿಸುವಂತೆ ಪೂಜಾ ಉಡ್ಜಾಪನ್ ಪರಿಷದ್ ಗೆ ಕೇಳಲಾಗಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಸಾರ್ವಜನಿಕ
ಆಸ್ತಿ ಕುರಿತಾದ ಕಾಯಿದೆ ತಿದ್ದುಪಡಿ ತರುವ ಮುನ್ನ, ಅಲ್ಪಸಂಖ್ಯಾತರ ಆಸ್ತಿಗಳ ಗಣತಿ ಹಾಗೂ ಅವನತಿ, ಅಭಿವೃದ್ಧಿ ಬಗ್ಗೆ ಬಾಂಗ್ಲಾ ಸರ್ಕಾರ ಚಿಂತಿಸತೊಡಗಿದೆ. ಅಲ್ಪಸಂಖ್ಯಾತರ ಆಸ್ತಿ ಹಕ್ಕು ಸಂಬಂಧಿಸಿದಂತೆ ಕಾನೂನು ನಿರೂಪಿಸಲಾಗಿದ್ದು, ಭಾರತ ಸ್ವಾತಂತ್ರದ ನಂತರ ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳ ಆಸ್ತಿಯ ಹಕ್ಕು ಸರ್ಕಾರದ ಕೈಲಿರುತ್ತದೆ ಎಂದು ಕಾನೂನು ಹೇಳುತ್ತದೆ. ಬಾಂಗ್ಲಾದ ಒಟ್ಟು ಜನಸಂಖ್ಯೆಯಲ್ಲಿ ಶೇ.9.2 ರಷ್ಟು ಜನ ಹಿಂದೂಗಳಿದ್ದಾರೆ.











Click it and Unblock the Notifications