ಅಬುಧಾಬಿಯಲ್ಲಿ ಚಿನ್ನ ಕೊಳ್ಳಲು ಎಟಿಎಮ್!

An ATM to buy Gold!
ಅಬುಧಾಬಿ, ಮೇ 14 : ಎಟಿಎಂನಿಂದ ಹಣ ತೆಗೆದುಕೊಳ್ಳಲು ಮತ್ತು ಠೇವಣಿ ಮಾಡಲು ಮಾತ್ರ ಸಾಧ್ಯ ಎಂದು ನೀವೇನಾದರೂ ಯೋಚಿಸುತ್ತಿದ್ದರೆ ಮತ್ತೊಮ್ಮೆ ಯೋಚಿಸಿ. ಇನ್ನು ಮುಂದೆ ಎಟಿಎಂ ಮುಖಾಂತರ ಚಿನ್ನವನ್ನು ಕೂಡ ಕೊಳ್ಳಬಹುದು. ಆದರೆ, ಈ ಅವಕಾಶವಿರುವುದು ಅಬುಧಾಬಿ ನಾಗರಿಕರಿಗೆ ಮಾತ್ರ.

ಅರಬ್ ಸಂಯುಕ್ತ ಗಣರಾಷ್ಟ್ರದ ಅಬುಧಾಬಿಯ ಹೋಟೆಲ್ ಒಂದರಲ್ಲಿ ವಿಶ್ವದ ಮೊದಲ ಚಿನ್ನ ಮಾರಾಟ ಯಂತ್ರವನ್ನು ಸ್ಥಾಪಿಸಲಾಗಿದ್ದು ಜನರನ್ನು ಅಪಾರವಾಗಿ ಆಕರ್ಷಿಸುತ್ತಿದೆ. ಇದರಲ್ಲಿ ಒಂದು, ಐದು ಮತ್ತು ಹತ್ತು ಗ್ರಾಮ್ ಗಳ ಚಿನ್ನದ ಬಿಲ್ಲೆಗಳನ್ನು ಖರೀದಿಸಬಹುದಾಗಿದೆ.

ಜರ್ಮನಿಯ ಕಂಪನಿಯೋಂದು ತಯಾರಿಸಿರುವ ಈ ಯಂತ್ರದಲ್ಲಿ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತಿರುವ ಚಿನ್ನದ ದರವನ್ನೂ ತೋರಿಸಲಾಗುತ್ತದೆ. ಇದನ್ನು ಅಬುಧಾಬಿಯ ಸೂಪರ್ ಲಕ್ಷುರಿ ಎಮಿರೇಟ್ಸ್ ಪ್ಯಾಲೇಸ್ ಹೋಟೆಲ್ ನಲ್ಲಿ ಸ್ಥಾಪಿಸಲಾಗಿದೆ.

ಈ ಯಂತ್ರದಲ್ಲಿ ಚಿನ್ನ ಉತ್ಪಾದಿಸುವ ದೇಶಗಳಾದ ಕೆನಡಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಚಿಹ್ನೆಗಳಿರುವ ನಾಣ್ಯಗಳು ದೊರೆಯುತ್ತವೆ. ಪ್ರತೀ ಗ್ರಾಮ್ ಚಿನ್ನಕ್ಕೆ ರೂ, 2141, 5 ಗ್ರಾಮ್ ಗೆ 9298 ಮತ್ತು ಒಂದು ಔನ್ಸ್ ಚಿನ್ನಕ್ಕೆ 56,832 ರೂಪಾಯಿ ದರ ಇದೆ. ಉನ್ನತ ಭದ್ರತೆಯೊಂದಿಗೆ ಈ ಯಂತ್ರವನ್ನು ಸ್ಫಾಪಿಸಲಾಗಿದ್ದು ಕಂಪ್ಯೂಟರೀಕೃತ ವ್ಯವಸ್ಥೆಯಿಂದ ಪ್ರತೀ ಹತ್ತು ಸೆಕೆಂಡ್ ಗಳಿಗೆ ಚಿನ್ನದ ದರ ಮಾರುಕಟ್ಟೆ ಆಧರಿಸಿ ಬದಲಾಗುತ್ತಿರುತ್ತದೆ ಮತ್ತು ಪ್ರತೀ ಹತ್ತು ನಿಮಿಷಗಳಿಗೊಮ್ಮೆ ದರ ಅಪ್ ಡೇಟ್ ಆಗುತ್ತದೆ.

ಬರುವ ಭಾನುವಾರ ಮೇ 16ರಂದು ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯಾ. ಈ ಸಂದರ್ಭದಲ್ಲೇ ಚಿನ್ನ ಕೊಳ್ಳುವ ಎಟಿಎಂ ಪ್ರಾರಂಭಿಸಿರುವುದು ಹಿಂದೂಗಳಿಗೆ ವರದಾನವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+