ರಾಜ್ಯಪಾಲರ ನೋಟಿಸ್ ತಿರಸ್ಕರಿಸಿದ ರೆಡ್ಡಿ
ಬೆಂಗಳೂರು,
ಮೇ. 11 : ಅಕ್ರಮ ಗಣಿಗಾರಿಕೆ, ಗಡಿ ಒತ್ತುವರಿ ಹಾಗೂ ಇತರೆ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಲು ಖುದ್ದು ಹಾಜರಾಗುವಂತೆ ರಾಜ್ಯಪಾಲರು ನೀಡಿದ್ದ ಎರಡನೇ ನೋಟಿಸ್ ನ್ನು ಸಹ ರೆಡ್ಡಿ ಸಹೋದರರು ತಿರಸ್ಕರಿಸಿದ್ದಾರೆ. id="toptextpromo">ರಾಜ್ಯಪಾಲರ
ನೋಟಿಸಿಗೆ ಉತ್ತರ ನೀಡುವಂತೆ ತಮ್ಮ ಪರ ವಕೀಲರನ್ನು ರಾಜಭವನಕ್ಕೆ ಕಳುಹಿಸಿದ್ದರಾದರೂ, ಅದನ್ನು ಒಪ್ಪದ ರಾಜ್ಯಪಾಲರು ಜೂನ್ 3 ರಂದು ಮೂವರು ಸಚಿವರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ. ಸಚಿವರೊಬ್ಬರ ವಿರುದ್ಧ ಬಂದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಅವರಿಗೆ ನೇರವಾಗಿ ನೋಟಿಸ್ ಜಾರಿ ಖುದ್ದಾಗಿ ಹಾಜರಾಗುವಂತೆ ಸೂಚಿಸಿರುವ ಪ್ರಕರಣ ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಸಲವಾಗಿದೆ. id='are-slot-1' class='oiad oi-axt oiadv'> id='top-searched-articles'>ಸಾಮಾನ್ಯವಾಗಿ
ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿಯಿಂದ ಮಾಹಿತಿಯನ್ನು ಪಡೆಯಲಾಗುತ್ತದೆ. ಆದರೆ, ಈ ಪ್ರಕರಣ ನೇರವಾಗಿ ಸಚಿವರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಕೆ ಸಿ ಕೊಂಡಯ್ಯ ಹಾಗೂ ಇತರರು ರಾಜ್ಯಪಾಲರಿಗೆ ದೂರು ನೀಡಿದ್ದರು.











Click it and Unblock the Notifications