ನಿಂತ ಲಾರಿಗೆ ಟೆಂಪೋ ಡಿಕ್ಕಿ : ನಾಲ್ವರ ಸಾವು
ಗುಲಬರ್ಗಾ,
ಮೇ 8 : ಯಾದಗಿರಿ ಜಿಲ್ಲೆಯ ಯಣಗುಂದಿ ಗ್ರಾಮದ ಬಳಿ ಹೈದರಾಬಾದ್-ಗುಲಬರ್ಗಾ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸತ್ತು 32 ಜನ ಗಾಯಗೊಂಡಿದ್ದಾರೆ. id="toptextpromo">ನಿಂತಿದ್ದ
ಲಾರಿಗೆ ಜನ ತುಂಬಿದ್ದ ಟೆಂಪೋ ಡಿಕ್ಕಿ ಹೊಡೆದಿದೆ. ಟೆಂಪೋ ಹೈದರಾಬಾದಿನಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹಾವಿನಾಳ ಗ್ರಾಮಕ್ಕೆ ತೆರಳುತ್ತಿತ್ತು. ವೇಗವಾಗಿ ಬರುತ್ತಿದ್ದ ಟೆಂಪೋ ನಿಂತಿದ್ದ ಲಾರಿಗೆ ಗುದ್ದಿದೆ. id='are-slot-1' class='oiad oi-axt oiadv'> id='top-searched-articles'>ಶ್ರೀಪತಿರಾವ್
ಭೀಮರಾವ್ ಸಾಳಂಕೆ (60), ಚಂದ್ರಾಬಾಯಿ (80), ಅಂಬುಬಾಯಿ (70) ಸ್ಥಳದಲ್ಲೇ ಸತ್ತರೆ, ಚಂದಿರಮ್ಮ (65) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಾಯಗೊಂಡವರನ್ನು ಗುರುಮಿಟ್ಕಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.











Click it and Unblock the Notifications