ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಪ್ಪಗೆ ನೋಟಿಸ್ ನೀಡಿದ ಸಿಐಡಿ

By Mrutyunjaya Kalmat
|
Google Oneindia Kannada News

ಬೆಂಗಳೂರು, ಮೇ. 7 : ಅತ್ಯಾಚಾರ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಮೇ 10 ರೊಳಗೆ ಪೊಲೀಸರ ಮುಂದೆ ಶರಣಾಗುವಂತೆ ಸಿಐಡಿ ತನಿಖಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.

ಸಿಐಡಿ ಅಧಿಕಾರಿಗಳು ಬೆಂಗಳೂರಿನ ಬಸವೇಶ್ವರ ನಗರದ ಮನೆ, ಶಾಸಕರ ಭವನದಲ್ಲಿ ನೋಟಿಸ್ ನ್ನು ಅಂಟಿಸಿದ್ದಾರೆ. ಹಾಲಪ್ಪ ಅವರು ಒಬ್ಬ ಜವಾಬ್ದಾರಿಯುತ ಶಾಸಕರು, ತಾವು ನೀಡಿರುವ ನೋಟಿಸ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಬೆಲೆ ನೀಡಿ ಹಾಜರಾಗುತ್ತಾರೆ. ಮೇ10 ರೊಳಗೆ ಖುದ್ದಾಗಿ ಹಾಜರಾಗದಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ತನಿಖಾಧಿಕಾರಿ ಹಾಗೂ ಸಿಐಡಿ ಡಿಐಜಿ ಚರಣ್ ರೆಡ್ಡಿ ತಿಳಿಸಿದ್ದಾರೆ. ಅರಮನೆ ರಸ್ತೆಯಲ್ಲಿರುವ ಸಿಐಜಿ ಕೇಂದ್ರ ಕಚೇರಿ, ಸಿಐಡಿ ವಿಭಾಗದ ಪೊಲೀಸ್ ಉಪಅಧಿಕ್ಷಕರಾದ ರೇಣುಕಾ ಕೆ ಸುಕುಮಾರ್ ಅವರ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ.

ನೋಟಿಸ್ ನಲ್ಲಿ ಏನಿದೆ...

ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, ಶಿವಮೂಗ್ಗ ಜಿಲ್ಲೆ ವಿನೋಬಾನಗರ ಪೊಲೀಸ್ ಠಾಣೆ ಮೊ.ಸಂ 106/10ಕಲಂ 376, 341, 342, 506 ರೆ/ವಿ ಸಂಬಂಧ ದಿನಾಂಕ 10.05.10 ರಂದು ಅಥವಾ ಅದರ ಒಳಗಾಗಿ ಈ ಕೆಳಗೆ ಸಹಿ ಮಾಡಿರುವ ತನಿಖಾಧಿಕಾರಿ ಅವರ ಮುಂದೆ ಸಿಐಡಿ ಕೇಂದ್ರ ಕಚೇರಿ, ಕಾರ್ಲಟನ್ ಭವನ, ಅರಮನೆ ರಸ್ತೆ ಬೆಂಗಳೂರು-01 ರಲ್ಲಿ ತಪ್ಪದೆ ಹಾಜರಾಗುವಂತೆ ನಿಮಗೆ ಈ ಮೂಲಕ ಸೂಚಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X