ಸಿಎಂ ಕಾರ್ಯದರ್ಶಿಯಿಂದ ಪತ್ನಿಗೆ ಮೋಸ!
ಬೆಂಗಳೂರು,
ಮೇ. 6 : ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ ರಾಜ್ಯಾದ್ಯಂತ ರಾಡಿ ಎಬ್ಬಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ ಜೆ ಪುಟ್ಟಸ್ವಾಮಿ ಅವರು ತಮ್ಮ ಪತ್ನಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. id="toptextpromo">ಪುಟ್ಟಸ್ವಾಮಿ
ಅವರ ಎರಡನೇ ಪತ್ನಿ ವಿಜಯಲಕ್ಷ್ಮಿ ಎಂಬುವವರು ಪುಟ್ಟಸ್ವಾಮಿ ಅವರಿಂದ ಅನ್ಯಾಯವಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ತಿಪಟೂರಿನಲ್ಲಿ ಸಣ್ಣ ಶೀಟ್ ಮನೆಯಲ್ಲಿ ವಾಸವಾಗಿರುವ ವಿಜಯಲಕ್ಷ್ಮಿ ಅನಾರೋಗ್ಯ ಪೀಡಿತರಾಗಿರುವುದರ ಜೊತೆಗೆ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದು, ತಮ್ಮ ಪತಿಯಿಂದ ನೆರವು ದೊರಕಿಸಿಕೊಡಿ ಎಂದು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗುಂಡೂರಾವ್
ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಸ್ವಾಮಿ ತಿಪಟೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ತನ್ನನ್ನು ನೋಡಿ ವಿವಾಹವಾಗಲು ಒಪ್ಪಿಕೊಂಡರು. ನಂತರ ಯಡಿಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮೂರು ವರ್ಷ ಕಾಲ ಮೈಸೂರು, ಬೆಂಗಳೂರಿನಲ್ಲಿ ಸಂಸಾರ ಮಾಡಿದ್ದೇವು. ಈ ಮಧ್ಯೆ ನನ್ನ ತಂದೆತಾಯಿಯ ಆರೋಗ್ಯ ತೊಂದರೆಯಿಂದ ನಾನು ತಿಪಟೂರಿಗೆ ಬಂದೆ. ಅವರು ಆಗಾಗ ನನಗೆ ಹಣ ಕಳುಹಿಸುತ್ತಿದ್ದರು. ಇತ್ತೀಚೆಗೆ ಕಳುಹಿಸುತ್ತಿಲ್ಲ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.











Click it and Unblock the Notifications