ಹಾಲಪ್ಪ ಪ್ರಕರಣ ಸಿಬಿಐ ತನಿಖೆ ಇಲ್ಲ : ಆಚಾರ್ಯ
ಮಂಗಳೂರು,
ಮೇ. 5 : ರಾಜ್ಯದ ಸಿಐಡಿ ಅಧಿಕಾರಿಗಳ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವೇ ಇಲ್ಲ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಸ್ಪಷ್ಟಪಡಿಸಿದ್ದಾರೆ. id="toptextpromo">ಬುಧವಾರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ. ಯಾವ ಪ್ರಭಾವವೂ ಇಲ್ಲದೇ ತನಿಖೆ ನಡೆಯಲಿದೆ. ಅಲ್ಲದೇ ಸತ್ಯ ಹೊರಬರಲಿದೆ ಎಂದರು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಮೇಲೆ ಈ ಪ್ರಕರಣ ಯಾವ ಪರಿಣಾಮವೂ ಬೀರುವುದಿಲ್ಲ. ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹರತಾಳು ಹಾಲಪ್ಪ ಅವರ ಕೆಲಸ ಸಮರ್ಥಿನೀಯ ಎಂದು ಆಚಾರ್ಯ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಹಾಲಪ್ಪ
ಅವರ ಮೇಲೆ ಗಂಭೀರ ಆರೋಪ ಬಂದಿದೆ. ಈ ಪ್ರಕರಣದಿಂದ ಅವರನ್ನು ಬಚಾವ್ ಮಾಡುವ ಯಾವ ಕೆಲಸವೂ ಸರಕಾರ ಮಾಡುತ್ತಿಲ್ಲ. ಸತ್ಯ ಹೊರಗೆ ಬರಬೇಕು ಎನ್ನುವುದು ಸರಕಾರದ ಆಶಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ. ಆದರೆ, ಪ್ರತಿಪಕ್ಷಗಳು ಆಗ್ರಹಿಸುವಂತೆ ಹಾಲಪ್ಪ ಅತ್ಯಾಚಾರ ಪ್ರಕರಣನ್ನು ಸಿಬಿಐ ತನಿಖೆ ವಹಿಸಲು ಸಾಧ್ಯವಿಲ್ಲ. ರಾಜ್ಯ ಸಿಐಡಿ ಇಲಾಖೆ ಸಮರ್ಥವಾಗಿದೆ ಎಂದು ಅವರು ಪ್ರತಿಪಾದಿಸಿದರು.











Click it and Unblock the Notifications