ಕಾಮುಕ ಪೇದೆ ರಾಜೇಂದ್ರ ಬಂಧನವಿಲ್ಲವೇಕೆ?

ಪೇದೆ ರಾಜೇಂದ್ರನ ಲೈಂಗಿಕ ಪ್ರಕರಣದಲ್ಲಿ ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟಕ (ಸಿಕ್ರಂ)ದ ಜಿಲ್ಲಾ ಸಮನ್ವಯಾಧಿಕಾರಿ ಎಸ್ಆರ್ ವಸಂತ್ ಅವರು ದೂರು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಈ ಹಿಂದೆ ಆರೋಪಿ ಪೋಲೀಸ್ ರಾಜೇಂದ್ರ, ಹಾರಂಗಿ ಜಲಾಶಯದ ಪೋಲೀಸ್ ಔಟ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದಾಗ ಕಂಠ ಪೂರ್ತಿ ಕುಡಿದು ಕೈದಿಗಳಿಗೆ ಹಾಕುವ ಕೈಕೋಳವನ್ನೇ ಬೀಗವನ್ನಾಗಿ ಠಾಣೆಗೆ ಹಾಕಿ ರಸ್ತೆಯಲ್ಲಿ ಕುಡಿದು ಮಲಗಿದ್ದ. ಕೂಡಲೇ ಪೋಲೀಸ್ ವರಿಷ್ಠಾದಿಕಾರಿಗಳು ಈತನನ್ನು ಅಮಾನತ್ತು ಮಾಡಿದ್ದರು.
ಆದರೆ ಕುಶಾಲನಗರ ಪೋಲೀಸರು ಈಗ ತಮ್ಮ ಸಹೋದ್ಯೋಗಿಯ ರಕ್ಷಣೆಗೆ ನಿಂತಿದ್ದಾರೆ ಎನಿಸುತ್ತದೆ. ಏಕೆಂದರೆ ಲೈಂಗಿಕ ಹಗರಣದ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಯನ್ನು ಹಿಮಾಚಲ ಪ್ರದೇಶದಿಂದ ಕರೆ ತಂದ ಪೋಲೀಸರಿಗೆ ಇಲ್ಲೇ ಓಡಾಡಿಕೊಂಡಿರುವ ಆರೋಪಿ ರಾಜೇಂದ್ರನನ್ನು ಏಕೆ ಹಿಡಿಯಲು ಸಾದ್ಯವಾಗುತ್ತಿಲ್ಲ? ಆರೋಪಿ ರಾಜೇಂದ್ರ ಒಬ್ಬ ಕುಡುಕನಾಗಿದ್ದು ಈ ಹಿಂದೆಯೂ ಎರಡು ಬಾರಿ ಅಮಾನತ್ತಿನ ಶಿಕ್ಷೆಗೊಳಗಾಗಿದ್ದ. ಖಾಕಿ ಬಟ್ಟೆ ಧರಿಸಿದಾಗಲೂ ಗೂಂಡಾನಂತೆ ವರ್ತಿಸುವ ಈತ ಅಮಾನತ್ತಿನಲ್ಲಿದ್ದರೂ ಕ್ರಿಮಿನಲ್ ಆಗಿ ಪರಿವರ್ತಿತನಾಗಿದ್ದಾನೆ.
ಈತನ ವಿರುದ್ದ ಶುಭಾ ನೀಡಿದ ದೂರಿನನ್ವಯ ಎರಡು ನಾನ್ ಬೇಲೆಬಲ್ ಪ್ರಕರಣಗಳು ದಾಖಲಾಗಿದ್ದರೂ ಪೋಲೀಸರು ಇನ್ನೂ ದೀರ್ಘ ನಿದ್ರಾವಸ್ಥೆಯಲ್ಲಿದ್ದಾರೆ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಈ ಕೆಲಸ ಮಾಡಿದ್ದರೆ ಪೋಲೀಸರು ಬಿಡುತ್ತಿದ್ದರೇ ?












Click it and Unblock the Notifications