ನಿರೀಕ್ಷಣಾ ಜಾಮೀನಿಗೆ ಹಾಲಪ್ಪ ಅರ್ಜಿ
ಬೆಂಗಳೂರು,
ಮೇ. 5 : ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಮುಂಜಾಗ್ರತಾ ಕ್ರಮವಾಗಿ ನಿರೀಕ್ಷಣಾ ಜಾಮೀನಿಗೆ ಬುಧವಾರ ಶಿವಮೂಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. id="toptextpromo">ಹಾಲಪ್ಪ
ಪರ ವಕೀಲರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ನಮ್ಮ ಕಕ್ಷಿದಾರ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ನ್ಯಾಯಾಯಲಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮಾಜಿ ಸಚಿವ ಹಾಲಪ್ಪ ತಮ್ಮ ಸ್ನೇಹಿತ ವೆಂಕಟೇಶ್ ಮೂರ್ತಿ ಎಂಬುವವರ ಪತ್ನಿ ಚಂದ್ರಾವತಿ ಅವರನ್ನು ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇದರ ಬಸವರಾಜ್ ಮತ್ತು ಗಿರೀಶ್ ಎಂಬುವವರ ಮೇಲೂ ಈ ಆರೋಪ ಹೊರಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಪ್ರಕರಣ
ಬೆಳಕಿಗೆ ಬಂದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಪ್ಪ, ಮರುದಿನ ಟಿವಿಗಳಲ್ಲಿ ಕಾಣಿಸಿಕೊಂಡು ಪ್ರಕರಣದಲ್ಲಿ ತಮ್ಮ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿಗೆ ಬಂದ ನಂತರ ಅವರನ್ನು ಬೇಟಿ ಮಾಡಿ ಚರ್ಚಿಸಿದ ಮೇಲೆ ಹಾಲಪ್ಪ ನಾಪತ್ತೆಯಾಗಿದ್ದಾರೆ. ಸದ್ಯ ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ಘಟನೆ ಬೆಳಕಿಗೆ ಬಂದು 72 ಗಂಟೆ ಕಳೆದಿದ್ದರೂ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಯನ್ನು ಬಂಧಿಸಿಲ್ಲ.











Click it and Unblock the Notifications