ಲಾರಿ ಕಳ್ಳತನ: ಮೂರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು ಗುಡ್ಡ ಅಲಿಯಾಸ್ ರಾಜಶೇಖರ್‌ನಾಯ್ಕ, ಹರಿಕೃಷ್ಣಾರೆಡ್ಡಿ ಮತ್ತು ದೇವೇಂದ್ರನಾಯ್ಕ. ಇವರು ಏಪ್ರಿಲ್ 16 ರಂದು ಆಂಧ್ರ ಮೂಲದ ಲಾರಿಯನ್ನು ಅಪಹರಿಸಿ ಲಾರಿಯ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಕರ್ನಾಟಕ ಆಂಧ್ರ ಗಡಿ ಭಾಗದಲ್ಲಿ ಗಣಿಗಾರಿಕೆಗೆ ಸೇರಿರುವ ಲಾರಿ/ಟ್ರಕ್ ಗಳನ್ನು ಕದ್ದು, ಬಿಡಿಭಾಗವನ್ನು ಮಾರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರು.












Click it and Unblock the Notifications