ಯಡಿಯೂರಪ್ಪನನ್ನ ಬಂಧಿಸಿ : ಪೂಜಾರಿ
ಮಂಗಳೂರು,
ಮೇ. 4 : ಅತ್ಯಾಚಾರ ಆರೋಪ ಎದುರಿಸುತ್ತಿರುವ ಹರತಾಳ್ ಹಾಲಪ್ಪ ಪರ ಸುಳ್ಳು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಐಪಿಸಿ ಸೆಕ್ಷನ್ 201ರ ಅಡಿ ಬಂಧಿಸಿ ಜೈಲಿಗೆ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ. id="toptextpromo">ನಗರದಲ್ಲಿ
ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತ್ಯಾಚಾರದ ವಾಸ್ತವಾಂಶ ಗೊತ್ತಿದ್ದರೂ ಹಾಲಪ್ಪ ಅವರನ್ನು ಹಾಡಿ ಹೊಗಳಿರುವ ಯಡಿಯೂರಪ್ಪ, ಸತ್ಯವನ್ನು ಮರೆಮಾಚುವ ಮೂಲಕ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಯಡಿಯೂರಪ್ಪ ಅವರನ್ನು ಬಂಧಿಸಬೇಕು. ಇಂತಹ ಅಪರಾಧಕ್ಕಾಗಿ ಅವರನ್ನು ಮೂರು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. id='are-slot-1' class='oiad oi-axt oiadv'> id='top-searched-articles'>ಆರೋಪಿ
ಹಾಲಪ್ಪನನ್ನು ಸಮರ್ಥಿಸಿಕೊಂಡಿರುವ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿರಲು ಯೋಗ್ಯತೆ ಇಲ್ಲ. ಸರಕಾರವನ್ನು ಬೀಳಿಸುವ ಕರ್ಮ ಕಾಂಗ್ರೆಸ್ ಗೆ ಇಲ್ಲ. ಹಾಲಪ್ಪ ಪ್ರಕರಣದಲ್ಲಿ ಷಡ್ಯಂತ್ರ ಇದೆ ಎನ್ನುವುದು ಶುದ್ಧ ಸುಳ್ಳು ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.











Click it and Unblock the Notifications