ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಪ್ರಕರಣ : ಶಿವಮೊಗ್ಗದಲ್ಲಿ ಸಿಐಡಿ ತಂಡ

By Mrutyunjaya Kalmat
|
Google Oneindia Kannada News

Chandravati and Venkatesh Murthy
ಬೆಂಗಳೂರು, ಮೇ. 4 : ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದ ಸಿಐಡಿ ತನಿಖೆ ಆರಂಭವಾಗಿದೆ. ಸಿಐಡಿ ಎಸ್ ಪಿ ಲೋಕೇಶ್ ನೇತೃತ್ವದ ತಂಡವನ್ನು ರಚಿಸಲಾಗಿದ್ದು, ಅಪರಾಧ ನಡೆದ ಸ್ಥಳವನ್ನು ಮೊದಲಿಗೆ ಪರಿಶೀಲನೆ ಮಾಡಲಾಗುವುದು ಎಂದು ಸಿಐಡಿ ಡಿಐಜಿ ಚರಣ್ ರೆಡ್ಡಿ ವಿವರಿಸಿದರು.

ವಿಡಿಯೋ : ಮಾಧ್ಯಮದ ಮುಂದೆ ಚಂದ್ರಾವತಿ

ಸಿಐಡಿ ಡಿಐಡಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೇಣುಕಾ ಸುಕುಮಾರನ್ ನೇತೃತ್ವದ ತಂಡ ಈಗಾಗಲೇ ಶಿವಮೊಗ್ಗಕ್ಕೆ ತೆರಳಿದೆ. ಪ್ರಥಮ ಹಂತದ ತನಿಖೆ ನಂತರ ಎಲ್ಲ ಸಾಕ್ಷ್ಯಾಧಾರಗಳ ಪರೀಕ್ಷೆ ನಡೆಸಿ ಅಗತ್ಯ ಬಿದ್ದರೆ ಆರೋಪಿಗಳನ್ನು ಬಂಧಿಸಲಾಗುವುದು ಎಂದರು. ಮುಖ್ಯವಾಗಿ ಅತ್ಯಾಚಾರಕ್ಕೆ ಒಳಗಾಗಿರುವ ಶಿವಮೂಗ್ಗದ ಚಂದ್ರಾವತಿ ಎಂಬ ಮಹಿಳೆ ನೀಡಿರುವ ದೂರಿನ ಆಧಾರ ಮೇಲೆ ಮಾಜಿ ಸಚಿವ ಹರತಾಳು ಹಾಲಪ್ಪ, ಬಸವರಾಜ್ ಮತ್ತು ಗಿರೀಶ್ ಎಂಬುವವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 376, 342, 506, 341 ಮತ್ತು 34 ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಚರಣ್ ರೆಡ್ಡಿ ಹೇಳಿದರು.

ರಾಜ್ಯ ಸಿಐಡಿ ಇಲಾಖೆಗೆ ಇಂದು ಮಧ್ಯಾಹ್ನ ಡಿಜಿ-ಐಜಿ ಅಜಯ್ ಕುಮಾರ್ ಸಿಂಗ್ ಅವರಿಂದ ಸಿಐಡಿ ತನಿಖೆಗೆ ಆದೇಶ ಬಂದಿದೆ. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಪ್ರಕರಣದ ತನಿಖೆಗೆ ಸಿಐಡಿ ಎಸ್ಪಿ ಲೋಕೇಶ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ರೇಣುಕಾ ಸುಕುಮಾರನ್ ನೇತೃತ್ವದ ತನಿಖಾ ತಂಡ ಶಿವಮೊಗ್ಗಕ್ಕೆ ತೆರಳಿದ್ದು, ದೂರಿನ ಪರಿಶೀಲನೆ ನಡೆಸಿ ನಂತರ ಅಪರಾಧ ನಡೆದ ಸ್ಥಳದ ಪರೀಕ್ಷೆ ನಡೆಸಲಾಗುವುದು ಎಂದು ರೆಡ್ಡಿ ವಿವರಿಸಿದರು.

ಕಳೆದ ವರ್ಷ ನವೆಂಬರ್ 26 ರಂದು ಶಿವಮೊಗ್ಗದ ವಿನೋಬಾನಗರದ ಮನೆಯೊಂದರಲ್ಲಿ ಘಟನೆ ನಡೆದಿದೆ. ವಿನೋಬಾನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಬಸವರಾಜ್ ಮತ್ತು ಗಿರೀಶ್ ಎಂಬುವವ ಮೇಲೆ ದೂರು ದಾಖಲಾಗಿದೆ ಎಂದರು.

ವಿಡಿಯೋ : ಹರತಾಳು ಹಾಲಪ್ಪ ಕಾಮಕಾಂಡದ ಚಿತ್ರಣ

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪ ಬಂದ ಕೂಡಲೇ ಆರೋಪಿಯನ್ನು ಬಂಧಿಸುವುದು ಪರಿಪಾಠ. ಆದರೆ, ಹಾಲಪ್ಪ ಪ್ರಕರಣದಲ್ಲಿ ಯಾವು ಕ್ರಮ ಕೈಗೊಳ್ಳುತ್ತೀರಿ, ಅವರನ್ನು ಬಂಧಿಸದಂತೆ ರಾಜಕೀಯ ಒತ್ತಡವೇನಾದರೂ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸಿಐಡಿ ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ. ಪ್ರಥಮ ಹಂತದ ತನಿಖೆ ನಂತರ ಅಗತ್ಯ ಬಿದ್ದರೆ ಯಾವುದೇ ಮುಲಾಜು ಇಲ್ಲದೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಚರಣ್ ರೆಡ್ಡಿ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X