ಚಂದ್ರಾವತಿ ಅವರಿಗೆ ಸೂಕ್ತ ರಕ್ಷಣೆ : ಆಚಾರ್ಯ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಈಗಾಗಲೇ ಸಿಐಡಿ ವಹಿಸಲಾಗಿದೆ. ಅಗತ್ಯ ಬಿದ್ದರೆ ಚಂದ್ರಾವತಿ ಮತ್ತವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡುವುದಾಗಿ ಹೇಳಿದರು. ಚಂದ್ರಾವತಿ ಅವರು ಸಚಿವ ಹಾಲಪ್ಪ ವಿರುದ್ಧ ನೀಡಿದ ದೂರನ್ನು ಶಿವಮೂಗ್ಗ ಪೊಲೀಸರು ಸ್ವೀಕರಿಸಲು ನಿರಾಕರಿಸಿದರು ಎನ್ನುವ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಭಾನುವಾರ ಚಂದ್ರಾವತಿ ಅವರು ಡಿಜಿಪಿಗೆ ದೂರು ನೀಡಿದ್ದು ತಕ್ಷಣವೇ ಡಿಜಿಪಿ ಅವರು ಈ ವಿಷಯವನ್ನು ತಮ್ಮ ಗಮನಕ್ಕೆ ತಂದರು ಎಂದು ಆಚಾರ್ಯ ವಿವರಿಸಿದ್ದಾರೆ.












Click it and Unblock the Notifications