ತಿಮ್ಮಪ್ಪನಿಗೆ ಡಾಲರ್ ಶೇಷಾದ್ರಿ ಸೇವೆ ಸಾಕು: ಹೈಕೋರ್ಟ್
ತಿರುಮಲ,
ಮೇ.1: ತಿರುಮಲ ತಿರುಪತಿ ದೇವಸ್ಥಾನದ(ಟಿಟಿಡಿ) ಪ್ರಧಾನ ಅರ್ಚಕ 'ಡಾಲರ್ ಶೇಷಾದ್ರಿ' ಎಂದೇ ಖ್ಯಾತರಾದ ಎನ್ ಶೇಷಾದ್ರಿ ಅವರನ್ನು ಸೇವೆಯಿಂದ ನಿವೃತ್ತಗೊಳಿಸುವಂತೆ ಆಂಧ್ರ ಹೈಕೋರ್ಟ್ ಟಿಟಿಡಿ ಆಡಳಿತ ಮಂಡಳಿಗೆ ಆದೇಶಿಸಿದೆ. ವಿಶ್ರಾಂತಿ ವೇತನ ಪಡೆಯುತ್ತಿರುವ ಅವರ ಸೇವೆಯನ್ನು ಈಗಾಗಲೆ ಎರಡು ಬಾರಿ ವಿಸ್ತರಿಸಲಾಗಿತ್ತು. id="toptextpromo">ಟಿಟಿಡಿ
ಆಡಳಿತ ಮಂಡಳಿ 2006ರಲ್ಲಿ ಹೊರಡಿಸಿದ ಠರಾವಿನ ಅನ್ವಯ ವಿಶ್ರಾಂತಿ ವೇತನ ಪಡೆಯುತ್ತಿದ್ದ ಡಾಲರ್ ಶೇಷಾದ್ರಿ ಅವರನ್ನು ಮತ್ತೆ ಎರಡು ವರ್ಷಗಳ ಕಾಲ ಸೇವೆಗೆ ನಿಯುಕ್ತಿಗೊಳಿಸಲಾಗಿತ್ತು. ಇದು ಎಷ್ಟು ಸರಿ ಎಂದು ಪ್ರಶ್ನಿಸಿ ಮಂಗಟಿ ಗೋಪಾಲ ರೆಡ್ಡಿ ಎಂಬುವವರು ಆಂಧ್ರ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಟಿಟಿಡಿಯ ಹಲವಾರು ಅವ್ಯವಹಾರಗಳಲ್ಲಿ ಡಾಲರ್ ಶೇಷಾದ್ರಿಯ ಕೈವಾಡವಿದೆ ಎಂದೂ ಅವರು ಆರೋಪಿಸಿದ್ದರು. id='are-slot-1' class='oiad oi-axt oiadv'> id='top-searched-articles'>ವಿಶ್ರಾಂತಿ
ವೇತನ ಪಡೆಯುತ್ತಿರುವ ಶೇಷಾದ್ರಿ ಅವರ ಸೇವೆಯನ್ನು ಈಗಾಗಲೆ ಎರಡು ಬಾರಿ ವಿಸ್ತರಿಸಲಾಗಿದೆ. ಮೂರನೆ ಬಾರಿಗೆ ವಿಸ್ತರಿಸುವುದು ಸರಿಯಲ್ಲ. ಎನ್ ಶೇಷಾದ್ರಿ ಅವರಿಗೆ ನಿವೃತ್ತಿಯನ್ನು ಘೋಷಿಸಿ ಎಂದು ಆಂಧ್ರ ಹೈಕೋರ್ಟ್ ನ ನ್ಯಾಯಪೀಠ ಟಿಟಿಡಿ ಆಡಳಿತ ಮಂಡಳಿಗೆ ಆದೇಶಿಸಿದೆ.











Click it and Unblock the Notifications