ರೆಡ್ಡಿ ಕಂಪನಿಯಿಂದ ಅರಣ್ಯ ಒತ್ತುವರಿ
ನವದೆಹಲಿ,
ಏ. 30 : ಬಳ್ಳಾರಿಯ ರೆಡ್ಡಿ ಸಹೋದರರ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ಬಳ್ಳಾರಿಯ ರಕ್ಷಿತ ಅರಣ್ಯದಲ್ಲಿ 2.4 ಹೆಕ್ಟೇರ್ ಪ್ರದೇಶ ಅತಿಕ್ರಮಿಸಿ ಗಣಿಗಾರಿಕೆ ನಡೆಸಿದೆ ಎಂಬ ಅಂಶವನ್ನು ಸುಪ್ರಿಂಕೋರ್ಟ್ ನೇಮಿಸಿದ್ದ ಭಾರತೀಯ ಸರ್ವೆ ಇಲಾಖೆ ಅಧಿಕಾರಿಗಳ ಸಮಿತಿಯು ಪತ್ತೆ ಮಾಡಿದೆ. id="toptextpromo">ಭಾರತೀಯ
ಸರ್ವೆ ಇಲಾಖೆಯ ಅಧಿಕಾರಿಗಳ ಸಮಿತಿಯು ಗುರುವಾರ ಸುಪ್ರಿಂಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶವನ್ನು ದಾಖಲಿಸಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿ ರೇಖೆ ಹಾಗೂ ಗಣಿಗಳ ಗಡಿ ವ್ಯಾಪ್ತಿಯನ್ನು ನಿಖರವಾಗಿ ಗುರುತಿಸುವ ತನಕ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಸಲ್ಲಿಸಿರುವ ವರದಿಯಲ್ಲಿ ಸಮಿತಿ ಶಿಫಾರಸ್ಸು ಮಾಡಿದೆ. ಉಭಯ ರಾಜ್ಯಗಳ ಗಡಿ ಗುರುತಿಸಿ ಅಕ್ರಮ ಗಣಿಗಾರಿಕೆ ಪತ್ತೆ ಮಾಡುವುದು ಸುಲಭದ ಕೆಲಸವಲ್ಲ ಎಂದು ಸಮಿತಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಸರ್ವೆ
ಸಮಿತಿಯು ತನ್ನ ವರದಿಯಲ್ಲಿ ಒಟ್ಟು 86 ಎಕರೆ ಒತ್ತುವರಿಯಾಗಿದೆ ಎಂದು ತಿಳಿಸಿದೆ. ಸಚಿವರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ಮಾಲೀಕತ್ವದ ಒಎಂಸಿ ಕಂಪನಿಗೆ ಆಂಧ್ರಪ್ರದೇಶ ಸರಕಾರ 66 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದೆ. ಆದರೆ, ಕಂಪನಿ 68.4 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.











Click it and Unblock the Notifications