ಮಡಿಕೇರಿ : ಕಳ್ಳಭಟ್ಟಿ ಕುಡಿದ ಆನೆ ತಂದ ಪೀಕಲಾಟ

A file photo of an elephant
ಮಡಿಕೇರಿ, ಏ. 29 : ನಕಲಿ ಮದ್ಯ ಕುಡಿದು ಪ್ರಜ್ಞೆತಪ್ಪಿ ಬಿದ್ದಿದ್ದ ಗಂಡಾನೆಯನ್ನು ಹರಸಾಹಸಪಟ್ಟು ರಕ್ಷಿಸಿದ ಘಟನೆ ದಕ್ಷಿಣ ಮಡಿಕೇರಿಯ ಕಾರೆಹಾಡ್ಲು ಅಭಯಾರಣ್ಯದಲ್ಲಿ ಸಂಭವಿಸಿದೆ. ಅರಣ್ಯ ಅಧಿಕಾರಿಗಳ ಪ್ರಕಾರ 25 ವರ್ಷದ ಆನೆ ಎಲ್ಲೋ ಹೆಂಡ ಕುಡಿದು ಬಂದು ಪ್ರಜ್ಞೆತಪ್ಪಿ ಹೊಲದಲ್ಲಿ ಬಿದ್ದಿತ್ತು. ಅದರ ಮರಿ ನಿಸ್ಸಹಾಯಕವಾಗಿ ಅದರ ಸುತ್ತ ಸುತ್ತುತ್ತಿತ್ತು.

ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಆನೆಯನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದರು. ಆದರೆ ಮರಿಯಾನೆ ಬಿಡಲಿಲ್ಲ. ಆನೆ ರಕ್ಷಣೆಗೆ ಬಂದ ಮರಿ ತಮ್ಮನ್ನು ಓಡಿಸಲು ಬಂದ ಮನುಷ್ಯರನ್ನು ಗುರಾಯಿಸಿ, ಹಿಮ್ಮೆಟ್ಟಿಸಲು ಮುಂದಾಯಿತು. ಇನ್ನೊಂದೆಡೆ, ಕುಡಿದು ಬಿದ್ದಿದ್ದ ಆನೆ ಪದೇ ಪದೆ ಏಳಲು ಪ್ರಯತ್ನಿಸಿ ವಿಫಲವಾಗಿ ಮತ್ತೆ ಮತ್ತೆ ಕೆಳಗೆ ಉರುಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ವರದಿಗಳು ಹೇಳಿದವು.

ಘಟನೆ ಗೊತ್ತಾದ ಕೂಡಲೇ ಅರಣ್ಯ ಅಧಿಕಾರಿ ಅಲೆಕ್ಸಾಂಡರ್, ಆರ್ಎಫ್ಒ ಮೊನ್ನಪ್ಪ ಮತ್ತು ತಂಡದವರು ಎರಡು ಪಳಗಿದ ಆನೆ (ಭರತ ಮತ್ತು ಅಶೋಕ) ಸಮೇತ ಸ್ಥಳಕ್ಕೆ ಧಾವಿಸಿದರು.

ಕಾಡಾನೆಯನ್ನು ಕಂಡ ತಕ್ಷಣ ಊರಾನೆ ಅಶೋಕನಿಗೆ ಹೆದರಿಕೆಯಾಯಿತು. ಕುಡಿದು ಮಲಗಿದ್ದ ಮದಿಸಿದ ಆನೆಯ ಹತ್ತಿರ ಸುಳಿಯಲೂ ಹಿಂದೇಟು ಹಾಕಿತು. ಆದರೆ, ಭರತ ಮಾತ್ರ ಧೈರ್ಯವಾಗಿ ಮುನ್ನುಗ್ಗಿ ಮಲಗಿದ್ದ ಆನೆಯನ್ನು ಎಬ್ಬಿಸಿ ನಿಲ್ಲಿಸುವಲ್ಲಿ ಸಫಲವಾಯಿತು. ನಂತರ ಕಾಡಾನೆ ಮತ್ತು ಅದರ ಮರಿ ಕಾಲಿಗೆ ಬುದ್ದಿಹೇಳಿ ಕಾಡಿನಲ್ಲಿ ಕಾಣದಂತೆ ಮಾಯವಾದವು. ಅಂಜುಬುರುಕ ಆನೆ ಅಶೋಕನನ್ನು ಅಧಿಕಾರಿಗಳು ಮತ್ತೆ ಕ್ಯಾಂಪಿಗೆ ಕರೆದೊಯ್ದರು. ಧೈರ್ಯದಿಂದ ವರ್ತಿಸಿ ಕಾರ್ಯದಕ್ಷತೆ ಮೆರೆದ ಭರತನನ್ನು ಎಲ್ಲರೂ ಕೊಂಡಾಡಿದರು.

ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಭರತನನ್ನು ನೀವು ಮುಂದಿನ ವರ್ಷದ ದಸರಾ ಮೆರವಣಿಗೆ ಸಮಯದಲ್ಲಿ ನೋಡಬಹುದು. ಆನೆಗಳಿಗೆ ಶೌರ್ಯ ಪ್ರಶಸ್ತಿ ಇದ್ದರೆ ನೀವು ಭರತನ ಹೆಸಕರನ್ನು ಶಿಫಾರಸ್ಸು ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+