ಇನ್ಫಿಗೆ ವಿದೇಶೀ ನೌಕರರ ನೇಮಕಾತಿ

V Balakrishnan
ಮುಂಬೈ, ಏ. 29: ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್ ತನ್ನ ಮಾರಾಟ ಹಾಗೂ ಸಲಹಾ ವಿಭಾಗಕ್ಕೆ 1000 ವಿದೇಶೀ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಕಂಪನಿಯ ಒಟ್ಟು ಆದಾಯದಲ್ಲಿ ವಿದೇಶೀ ವಹಿವಾಟಿನ ಪಾಲು ಶೇ. 98ರಷ್ಟು ಇದೆ ಆದರೆ, ಕೆಲಸಗಾರರಲ್ಲಿ ಕೇವಲ ಶೇ. 5-6ರಷ್ಟು ವಿದೇಶೀಯರಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಇನ್ಪೋಸಿಸ್ ನ ಮಾರಾಟ ವಿಭಾಗದಲ್ಲಿ 700 ಹಾಗೂ ಸಂಪರ್ಕ ವಿಭಾಗದಲ್ಲಿ 550 ಕೆಲಸಗಾರರಿದ್ದಾರೆ. ಇನ್ಫೋಸಿಸ್ ನ ಪ್ರತಿಸ್ಪರ್ಧಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ನಲ್ಲಿ ಸುಮಾರು 700 ಮಂದಿ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಇವರಲ್ಲಿ ಶೇ. 6.7ರಷ್ಟು ವಿದೇಶೀಯರಿದ್ದಾರೆ. ಜಾಗತಿಕ ಆರ್ಥಿಕ ಹಿಂಜರಿತದಿಂದ ತಮ್ಮ ಆದಾಯದಲ್ಲಿ ಕುಸಿತ ಕಂಡಿದ್ದ ಮಾಹಿತಿ ತಂತ್ರಜ್ಞಾನ ಕಂಪನಿಗಳು ಇದೀಗ ಪುನಃ ಸಹಜ ಸ್ಥಿತಿಗೆ ಮರಳಿವೆ ಎಂದರು.

ಐಟಿ ಕಂಪನಿಗಳು ಮೊದಲ ಬಾರಿಗೆ ತಂತ್ರಜ್ಞಾನದಿಂದ ಅಲ್ಲದೆ ಹೊರಗುತ್ತಿಗೆಯ ಮೂಲಕ ಉತ್ತಮ ಬೆಳವಣಿಗೆ ದಾಖಲಿಸುತ್ತಿವೆ. ಇದರಿಂದ ವಿದೇಶೀ ನೌಕರರ ಅವಶ್ಯಕತೆ ಇದೆ ಎಂದು ಬಾಲಕೃಷ್ಣನ್ ಕಂಪನಿಯ ನೀತಿ ನಿಯಮಗಳನ್ನು ಸಮರ್ಥಿಸಿಕೊಂಡರು. ಇನ್ಫೋಸಿಸ್ 1,13,796 ನೌಕರರನ್ನು ಹೊಂದಿದೆ. ಟಿಸಿಎಸ್ ನಲ್ಲಿ 1,60,429 ನೌಕರರಿದ್ದಾರೆ.

ಬಯೋಕಾನ್ ಲಾಭ ಮೂರು ಪಟ್ಟು ಜಿಗಿತ : ಪ್ರಮುಖ ಫಾರ್ಮ ಕಂಪನಿ ಬಯೋಕಾನ್ ಕಳೆದ ಮಾಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 80.62 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು ಲಾಭದಲ್ಲಿ ಮೂರು ಪಟ್ಟು ಏರಿಕೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 24.88 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ಬೆಂಗಳೂರು ಮೂಲದ ಈ ಕಂಪೆನಿ ತಲಾ ಶೇರು ಒಂದಕ್ಕೆ ರೂ 3.50 ಅಥವಾ ಶೇ. 70ರಷ್ಟು ಡಿವಿಡೆಂಡ್ ಘೋಷಿಸಿದೆ. ಬಯೋಕಾನ್ ನ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಮುಜುಮ್ ದಾರ್ ಷಾ ಅವರು ಮುಂಬೈನಲ್ಲಿ ಮತನಾಡಿ ಕಂಪನಿ ಮುಂದಿನ ತಿಂಗಳುಗಳಲ್ಲಿ ಇನ್ನೂ ಉತ್ತಮ ಬೆಳವಣಿಗೆ ದಾಖಲಿಸಲಿದೆ ಎಂದರು.

ನಾಳೆ ಶುಭ ಶುಕ್ರವಾರ?:
ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಶುಕ್ರವಾರ ಕೆಲವೊಂದು ತೆರಿಗೆ ರಿಯಾಯ್ತಿಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ. ಈ ಹಿಂದೆ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದ ಗೃಹ ಉದ್ಯಮಕ್ಕೆ ಸೇವಾ ತೆರಿಗೆಯಲ್ಲಿ ಪರಿಷ್ಕರಣೆ ಮಾಡಲು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. 2010-11ರ ಹಣಕಾಸು ಮಸೂದೆ ಕೂಡ ಶುಕ್ರವಾರ ಲೋಕಸಭೆಯಲ್ಲಿ ಅನುಮತಿಗಾಗಿ ಮಂಡನೆಯಾಗಲಿದೆ.

ಅನೇಕ ಸಂಸ್ಥೆಗಳು ತೆರಿಗೆ ರಿಯಾಯ್ತಿ ಕೋರಿ ಪ್ರಸ್ತಾವನೆ ಸಲ್ಲಿಸಿವೆ ಎಂದು ಮುಖರ್ಜಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಒಂದು ಡಜನ್ ಗೂ ಹೆಚ್ಚು ಮನೆಗಳಿರುವ ಸಮುಚ್ಚಯಕ್ಕೆ ಸೇವಾ ತೆರಿಗೆ ವಿಧಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದರಿಂದ ಸಾಮಾನ್ಯ ವರ್ಗದ ಜನರು ಮನೆ ಕೊಳ್ಳುವುದು ಕಷ್ಟಕರ ಎಂದಿದ್ದಾರೆ. ಪರ್ಯಾಯವಾಗಿ ಪಾವತಿಸಬೇಕಾದ ತೆರಿಗೆಯನ್ನು ಶೇ. 18ರಿಂದ 15ಕ್ಕೆ ಇಳಿಸುವ ಸಾಧ್ಯತೆ ಇದೆ ಎಂದು ನಿರೀಕ್ಷೆ. ಆದರೆ ಪ್ರತಿ ಪಕ್ಷಗಳ ಪ್ರಮುಖ ಬೇಡಿಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಹಿಂತೆಗೆದುಕೊಳ್ಳಲು ಸರ್ಕಾರ ಖಡಾಖಂಡಿತವಾಗಿ ನಿರಾಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+