ಸ್ಯಾಮ್ ಪಿತ್ರೋಡಾಗೆ ಗೌರವ ಡಾಕ್ಟರೇಟ್
ಶಿಕಾಗೋ,
ಏ. 28 : ಟೆಲಿಕಾಂ ದಿಗ್ಗಜ ಹಾಗೂ ಪ್ರಧಾನಮಂತ್ರಿಗಳ ಮೂಲಭೂತ ಸೌಕರ್ಯ ಮತ್ತು ಸಂಶೋಧನೆಗಳ ಸಲಹೆಗಾರ ಸ್ಯಾಮ್ ಪಿತ್ರೋಡಾ ಅವರಿಗೆ ಅಮೆರಿಕದ ಇಲಿನಾಯ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದಾಗಿ ಘೋಷಿಸಿದೆ. ಮೇ 7, 2010 ರಂದು ಇಲಿನಾಯ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. id="toptextpromo">ವಿಶ್ವವಿದ್ಯಾಲಯವು
ಪ್ರತಿವರ್ಷ ಆಯ್ದ ಕೆಲ ಕ್ಷೇತ್ರಗಳಲ್ಲಿ ಮುಖ್ಯವಾಗಿ ಸಂಶೋಧನೆ, ಸಾಮಾಜಿಕ ಸೇವೆ ಹಾಗೂ ಉಪನ್ಯಾಸಕ ವೃತ್ತಿಯಲ್ಲಿ ಕೃಷಿ ಮಾಡಿರುವ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತಿದೆ. ಈ ವರ್ಷದ ಪ್ರಶಸ್ತಿಗೆ ಭಾರತದ ಟೆಲಿಕಾಂ ಗುರು ಎಂದು ಖ್ಯಾತಿ ಹೊಂದಿರುವ ಪ್ರಧಾನಮಂತ್ರಿಗಳ ಮೂಲಭೂತ ಸೌಕರ್ಯಗಳು ಹಾಗೂ ಸಂಶೋಧನೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸ್ಯಾಮ್ ಪಿತ್ರೋಡಾ ಅವರಿಗೆ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. id='are-slot-1' class='oiad oi-axt oiadv'> id='top-searched-articles'>ಭಾರತದ
ಪ್ರತಿ ಹಳ್ಳಿಗಳಿಗೂ ದೂರವಾಣಿ ಸೇವೆ ದೊರೆಯುವಲ್ಲಿ ಪಿತ್ರೋಡಾ ಅವರ ಸೇವೆ ಗಣನೀಯ. ಸಾಮಾನ್ಯನಿಗೂ ದೂರವಾಣಿ ಸೇವೆ ಸಿಗಬೇಕು ಎಂಬ ಮಹತ್ವಕಾಂಕ್ಷೆಯಿಂದಾಗಿ ಪಿತ್ರೋಡಾ ನಡೆಸಿದ ಸಂಶೋಧನೆ ಫಲಕಾರಿಯಾಗಿದ್ದರಿಂದ ಇಂದು ನಾವೆಲ್ಲರೂ ಪ್ರತಿ ಹಳ್ಳಿಗಳಿಂದ ಜಗತ್ತಿನ ಯಾವ ನಗರಕ್ಕಾದರೂ ನೇರವಾಗಿ ಮಾತನಾಡುಬಹುದಾಗಿದೆ. ಇಂತಹ ಸಾಧಕರಿಗೆ ಅಮೆರಿಕದ ವಿವಿಯೊಂದು ಗೌರವ ಡಾಕ್ಟರೇಟ್ ಕೊಡಮಾಡಿದ್ದು ಭಾರತೀಯರಿಗೆ ಸಂತಸದ ಸಂಗತಿಯಾಗಿದೆ. ಪಿತ್ರೋಡಾ ಅವರು ಭಾರತದ ಸರಕಾರದ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.











Click it and Unblock the Notifications