ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಟ್ಲರ್ ಗೆ ಕ್ಲೀನ್ ಚಿಟ್, ಕೋರ್ಟ್ ಸಮ್ಮತಿ

By Mahesh
|
Google Oneindia Kannada News

Jagadish Tytler
ನವದೆಹಲಿ, ಏ.28: 1984ರಲ್ಲಿ ನಡೆದ ಸಿಖ್ ವಿರೋಧಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್‌ಗೆ ಕ್ಲೀನ್ ಚಿಟ್ ಕೊಟ್ಟ ಸಿಬಿಐ ವರದಿಗೆ ದೆಹಲಿ ಹೈಕೋರ್ಟ್ ಸಹಮತ ವ್ಯಕ್ತಪಡಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ಉತ್ತರ ದೆಹಲಿಯ ಗುರ್ ದ್ವಾರ ಬಳಿ ನಡೆದಿದ್ದ ಸಿಖ್ ಹತ್ಯಾಕಾಂಡದ ಅರೋಪವನ್ನು ಟೈಟ್ಲರ್‌ ಮೇಲೆ ಹೊರಸಲಾಗಿತ್ತು.

ಸಿಖ್ ಹತ್ಯಾಕಾಂಡದ ಕುರಿತಂತೆ ಕ್ಯಾಲಿಫೋರ್ನಿಯಾ ಮೂಲದ ಜಸ್ಬೀರ್ ಸಿಂಗ್ ಹಾಗೂ ಸುರೀಂದರ್ ಸಿಂಗ್ ಅವರ ಹೇಳಿಕೆ ಅಪ್ರಸ್ತುತ ಹಾಗೂ ಆಧಾರ ರಹಿತ ,ಟೈಟ್ಲರ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಪುರಾವೆಗಳ ಕೊರತೆ ಕಂಡು ಬಂದಿದೆ ಎಂದುಹೆಚ್ಚುವರಿ ಮೆಟ್ರೋಪೊಲಿಟನ್ ನ್ಯಾಯಾಧೀಶ ರಾಕೇಶ್ ಪಂಡಿತ್ ಅವರು ತಿಳಿಸಿದರು.

ಟೈಟ್ಲರ್ ವಿರುದ್ಧ ತನಿಖೆ ನಡೆಸಿದ್ದ ಸಿಬಿಐ 2007ರಲ್ಲಿ ಸಲ್ಲಿಸಿದ್ದ ವರದಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಟೈಟ್ಲರ್‌ಗೆ ಕ್ಲೀನ್ ಚಿಟ್ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ ವರದಿಯನ್ನು ಸಿಬಿಐ 2009ರ ಏ. 2ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು. 1984 ರಲ್ಲಿ ಸಿಖ್ ಸಮುದಾಯದ ಬಯಾಂತ್ ಸಿಂಗ್ ನೇತೃತ್ವದಲ್ಲಿ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾ ಗಾಂಧಿ ಅವರ ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಸಿಖ್ ರ ಮೇಲೆ ತೀವ್ರವಾದ ದಾಳಿ ನಡೆದಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X