ಬಂದ್ ಬಿಸಿಗೆ ಬಸವಳಿದ ಬಳ್ಳಾರಿ ಬಂಧುಗಳು
ಬಳ್ಳಾರಿ, ಏ. 28 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ವಿರೋಧಿಸಿ ಅಖಿಲ ಭಾರತ ಬಂದ್ ಅಂಗವಾಗಿ ಮಂಗಳವಾರ ಜಿಲ್ಲೆಯಾದ್ಯಂತ ಬಂದ್ ಮಿಶ್ರ ಪ್ರತಿಕ್ರಿಯೆ ಪಡೆದಿದೆ.
ಬಂದ್ ಅಂಗವಾಗಿ ಶಾಲಾ-ಕಾಲೇಜ್ಗಳು ಬಂದ್ ಆಗಿದ್ದವು. ನಗರದ ಮುಖ್ಯ ರಸ್ತೆಗಳಲ್ಲಿ ಮಧ್ಯಾಹ್ನದವರೆಗೆ ಬಿಕೋ ಅನ್ನುತ್ತಿದ್ದವು. ಬಳ್ಳಾರಿ ಜಿಲ್ಲೆಯ ಬಿಸಿಲ ತಾಪದಲ್ಲಿ ಬಸವಳಿದ ಜನರು ಬಂದ್ನಿಂದ ಮತ್ತಷ್ಟು ತತ್ತರಿಸಿದರು. ಅಲ್ಲದೇ, ಮಧ್ಯಾಹ್ನದ ನಂತರ ಜಿಲ್ಲೆಯಾದ್ಯಂತ ಜನಜೀವನ ಯಥಾಸ್ಥಿತಿ ತಲುಪಿತ್ತು. ರಸ್ತೆಗಳಲ್ಲಿ ಜನಸಂಚಾರ, ಬಸ್ - ಆಟೋಗಳ ಸಾರಿಗೆ ಸಾಮಾನ್ಯವಾಗಿತ್ತು. ಸಂಜೆಯಿಂದ ಸಿನಿಮಾ ಮಂದಿರಗಳು ಪ್ರದರ್ಶನ ನಡೆಸಿದವು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಓಡಾಟವನನ್ನು ಮಧ್ಯಾಹ್ನದವರೆಗೆ ನಿಲುಗಡೆ ನಡೆಸಿತ್ತು. ಈ ಮುಷ್ಕರದಿಂದ ಬೇರೆ ಊರುಗಳಿಂದ ಆಗಮಿಸಿದ್ದ ಬಸ್ಗಳು ಊರ ಹೊರಗಡೆ ನಿಲುಗಡೆ ಆಗಿದ್ದರಿಂದ ಪ್ರಯಾಣಿಕರು ಕಾಲ್ನಡಿಗೆ ತೆರಳಬೇಕಾಯಿತು. ಬಸ್ ನಿಲ್ದಾಣದಲ್ಲಿ ಆಗಮಿಸಿದ್ದ ಬಸ್ಗಳು ಅಲ್ಲಿಯೆ ನಿಲುಗಡೆ ಹೊಂದಿದ್ದರಿಂದ ಪ್ರಯಾಣಿಕರು ಪರಿತಪಿಸುವಂತಾಯಿತು. ಸಿನಿಮಾ ಮಂದಿರಗಳು ಬೆಳಿಗ್ಗೆ ಹಾಗೂ ಮಧ್ಯಾಹ್ನದ ಪ್ರದರ್ಶನಗಳನ್ನು ರದ್ದುಗೊಳಿಸಿದ್ದವು.
ಎಲ್ಲಾ ರಾಷ್ಟ್ರೀಕತ ಬ್ಯಾಂಕ್ಗಳು ತಮ್ಮ ವಹಿವಾಟು ನಡೆಸಲಿಲ್ಲ. ಪ್ರತಿಭಟನೆಕಾರರು ಕೆಲವು ಬ್ಯಾಂಕಿಗೆ ತೆರಳಿ ಪ್ರತಿಭಟನೆಯ ಬಗ್ಗೆ ಮನವೋಲಿಸಿದ್ದರಿಂದ ಎಲ್ಲಾ ಬ್ಯಾಂಕ್ ತಮ್ಮ ವಹಿವಾಟು ನಿಲ್ಲಿಸಬೇಕಾಯಿತು. ದೂರ ಸಂಪರ್ಕ ಇಲಾಖೆಯ ಕಚೇರಿಗೆ ಪ್ರತಿಭಟನೆಕಾರರು ತೆರಳಿ ಅದನ್ನು ಬಂದ್ಗೊಳಿಸುವಲ್ಲಿ ಯಶಸ್ವಿಯಾದರು. ನಗರಸಭೆ ಕಚೇರಿಯಲ್ಲಿ ಕೆಲವು ನೌಕರರು ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿರುವುದನ್ನು ಗಮನಿಸಿ, ಅಲ್ಲಿಗೆ ತೆರಳಿ ಒಳಗಿದ್ದ ನೌಕರರನನ್ನು ಹೊರಗೆ ಕಳಿಸಿ, ಬೀಗ ಹಾಕಿಸಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications