ಭ್ರಷ್ಟಾಚಾರ : ಕೇತನ್ ದೇಸಾಯಿ ಬಲೆಗೆ

Ketan Desai
ನವದೆಹಲಿ, ಏ. 23 : ಪಂಜಾಬಿನ ವೈದ್ಯಕೀಯ ಕಾಲೇಜೊಂದಕ್ಕೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಎರಡು ಕೋಟಿ ಲಂಚ ಸ್ವೀಕರಿಸುತ್ತಿದ್ದಾಗ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಅಧ್ಯಕ್ಷ ಕೇತನ್ ದೇಸಾಯಿ ಸಿಬಿಐ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಈ ಕುರಿತು ವಿವರಣೆ ನೀಡಿರುವ ಸಿಬಿಐ ವಕ್ತಾರ, ಹರ್ಷಾ ಬಹಲ್, ಪಂಜಾಬಿನ ಜ್ಞಾನ ಸಾಗರ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವ ಕುರಿತು ಕಾಲೇಜಿನ ಮುಖ್ಯಸ್ಥ ಡಾ. ಕನ್ವಲ್ ಜಿತ್ ಸಿಂಗ್ ಅವರು ಎಂಸಿಐ ಅಧ್ಯಕ್ಷ ಕೇತನ್ ದೇಸಾಯಿ ಅವರಿಗೆ ಎರಡು ಕೋಟಿ ರುಪಾಯಿಗಳನ್ನು ನೀಡುತ್ತಿರುವಾಗ ದಾಳಿ ನಡೆಸಿ ದೇಸಾಯಿ ಮತ್ತು ಅವರ ಸಹಾಯಕ ಜಿತೇಂದರ್ ಪಾಲ್ ಸಿಂಗ್ ಹಾಗೂ ಡಾ. ಕನ್ವಲ್ ಜಿತ್ ಸಿಂಗ್ ಅವರನ್ನು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+