ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆಗಳಲ್ಲಿ ಮದುಮಗಳು ವಿಮರ್ಶಾ ಸ್ಪರ್ಧೆ

By Prasad
|
Google Oneindia Kannada News

Malegalalli Madumagalu novel review contest
ಬೆಂಗಳೂರು, ಏ. 16 : ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಂಸ್ಥೆಯು ಯುವಜನರು ಹಾಗೂ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರಾಷ್ಟ್ರಕವಿ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ'ವಿಮರ್ಶಾ ಬರಹ'ಸ್ಪರ್ಧೆ ಏರ್ಪಡಿಸಿದೆ. ಜೊತೆಗೆ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಮೈಸೂರಿನ ರಂಗಾಯಣವು ರಂಗರೂಪಕ್ಕಿಳಿಸಿದೆ.

ಕಾದಂಬರಿಯನ್ನು ಓದಿ, ನಾಟಕ ವೀಕ್ಷಿಸಿ ವಿಮರ್ಶಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಏಪ್ರಿಲ್ 23ರಿಂದ ಮೇ 11ರವರೆಗೆ ದಿನ ಬಿಟ್ಟು ದಿನ ಮೈಸೂರಿನ ರಂಗಾಯಣದಲ್ಲಿ ನಡೆಯುವ ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಆಯೋಜನೆಗೊಂಡಿದೆ.

ಇಷ್ಟವುಳ್ಳವರು ಹೆಚ್ಚಿನ ವಿವರಗಳಿಗೆ ಡಾ.ಎಂ. ಬೈರೇಗೌಡ (ಕಾರ್ಯದರ್ಶಿ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್.) ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂ: 94481 02158.

ಸ್ಪರ್ಧೆಯ ವಿವರ ಹಾಗೂ ಸೂಚನೆಗಳು

* ಕಾದಂಬರಿಯ ಓದು ಮತ್ತು ನಾಟಕ ವೀಕ್ಷಣೆ ಕಡ್ಡಾಯ. ಬರಹ ಫುಲ್ ಸ್ಕೇಪ್ ಹಾಳೆಯ ಐದು ಪುಟಗಳಿಗೆ ಕಡಿಮೆಯಿರದಂತೆ ಒಂದೇ ಮಗ್ಗುಲಲ್ಲಿ ಬರೆದಿರಬೇಕು. (ಕೈ ಬರಹ ಅಥವ ಮುದ್ರಿತ).

* ಬಹುಮಾನದ ವಿವರ : ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಮುದ್ದುಶ್ರೀ ಹೆಸರಿನಲ್ಲಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡುತ್ತದೆ. ಆಯ್ಕೆಯಾದ ವಿಮರ್ಶಾ ಬರಹಗಳ ಸಂಕಲನವನ್ನು ಪ್ರಕಟಿಸಿ, ಮೈಸೂರಿನ ರಂಗಾಯಣದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ವಿತರಿಸಲಾಗುವುದು. ಒಟ್ಟು ಆರು ನಗದು ಬಹುಮಾನಗಳಿರುತ್ತವೆ. ಬಹುಮಾನವು ಪ್ರಶಸ್ತಿ ಪತ್ರದೊಂದಿಗೆ, ಸಾಮಾನ್ಯ ವರ್ಗಕ್ಕೆ ರೂ.5000/ ರೂ.ಗಳ ನಗದು (ಒಂದು), ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ತಲಾ ರೂ. 4000/- (ಎರಡು), ಎರಡೂ ವಿಭಾಗವೂ ಸೇರಿ ತಲಾ ರೂ. 2000ರಂತೆ ಮೂರು ಬಹುಮಾನಗಳು.

* ಸಾಮಾನ್ಯ ವರ್ಗದ ಸ್ಪರ್ಧಿಗಳ ವಯೋಮಿತಿ 30 ವರ್ಷಗಳ ಒಳಗಿರಬೇಕು. (ಎಸ್.ಎಸ್.ಎಲ್.ಸಿ.ಅಂಕಪಟ್ಟಿ ಲಗತ್ತಿಸಬೇಕು.) ವಿದ್ಯಾರ್ಥಿಗಳು ಕಾಲೇಜು/ವಿಶ್ವವಿದ್ಯಾಲಯದ ಪ್ರಾಂಶುಪಾಲರು ಮತ್ತು ವಿಭಾಗ ಮುಖ್ಯಸ್ಥರಿಂದ ಪ್ರಮಾಣೀಕರಿಸಿದ ಪತ್ರವನ್ನು ತಮ್ಮ ಬರಹದೊಂದಿಗೆ ಲಗತ್ತಿಸಿರಬೇಕು.

* ಕಡೇ ದಿನಾಂಕ ಮತ್ತು ಲೇಖನ ತಲುಪಿಸಬೇಕಾದ ವಿಳಾಸ: 15ನೇ ಮೇ 2010. ಕಾರ್ಯದರ್ಶಿ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ನಂ. 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು. 560 104, [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X